ADVERTISEMENT

ಪುನರ್ವಸತಿ ಅಧಿಕಾರಿಯನ್ನೇ ಮುಂದುವರೆಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 5:50 IST
Last Updated 13 ಮಾರ್ಚ್ 2014, 5:50 IST

ಆಲಮಟ್ಟಿ: ವ್ಯಾಪಕ ಭ್ರಷ್ಟಾಚಾರದ ತಾಣವಾಗಿದ್ದ ಆಲಮಟ್ಟಿ ಕೆಬಿಜೆ ಎನ್‌ಎಲ್‌ ಪುನರ್ವಸತಿ ಅಧಿಕಾರಿಗಳ ಕಚೇರಿಗೆ ಕಾಯಕಲ್ಪ ನೀಡಿ, ದಲ್ಲಾಳಿ ಗಳನ್ನು ಹೊರಗಟ್ಟಿ, ಸಂತ್ರಸ್ತರ ಪರ ನೀತಿ ಜಾರಿಗೆ ತಂದ ಪ್ರಭಾರ ಪುನರ್ವಸತಿ ಅಧಿಕಾರಿ ದಿನೇಶಕುಮಾರ ಟಿ.ಜಿ. ಅವರನ್ನೇ ಪೂರ್ಣ ಪ್ರಮಾಣದಲ್ಲಿ ಅಧಿಕಾರಿಯಾಗಿ ನೇಮಿಸಬೇಕು ಎಂದು ಸಂತ್ರಸ್ತ ಮುಖಂಡರು ಆಗ್ರಹಿಸಿದ್ದಾರೆ.

ಈ ಕುರಿತು, ಮಹಾ ವ್ಯವಸ್ಥಾಪ ಕರಿಗೆ, ಜನಪ್ರತಿನಿಧಿಗಳಿಗೆ ಪತ್ರ ಬರೆದಿ ರುವ ಸಂತ್ರಸ್ತ ಮುಖಂಡರು, ದಿನೇಶ ಕುಮಾರ ಅವರು ಪ್ರಭಾರ ಆಗಿ ಅಧಿ ಕಾರ ಸ್ವೀಕರಿಸಿದ ನಂತರ ಆ ಕಚೇರಿ ಯಲ್ಲಿ ನಡೆಯುತ್ತಿದ್ದ ಸಂತ್ರಸ್ತರ ಸುಲಿಗೆ, ದಲ್ಲಾಳಿಗಳ ಅಟ್ಟಹಾಸಕ್ಕೆ ಕಡಿವಾಣ ಬಿದ್ದಿದೆ. ಸದಾ ಗೊಂದಲದ ಗೂಡಾಗಿದ್ದ ಈ ಕಚೇರಿ, ಒಂದೇ ನಿವೇಶನದ ಹಕ್ಕು ಪತ್ರ ನಾಲ್ಕೈದು ಜನಕ್ಕೆ, ಲಂಚವಿಲ್ಲದೇ ಯಾವುದೇ ಕೆಲಸವೂ ಇಲ್ಲ ಎಂಬ ಅನಿಯಮಿತ ನೀತಿ ಇಲ್ಲಾಗಿದ್ದನ್ನು ಹೋಗಲಾಡಿಸಲು ಪಣ ತೊಟ್ಟಿರುವ ದಿನೇಶ್‌ಕುಮಾರ, ಪ್ರತಿ ವ್ಯಕ್ತಿಯ ಸಮಸ್ಯೆಯನ್ನು ಖುದ್ದಾಗಿ ಆಲಿಸಿ ಕಾಲ ಮಿತಿಯಲ್ಲಿ ಮಾಡಿಕೊಡುತ್ತಿದ್ದಾರೆ. ಪುನರ್ವಸತಿ ಕೇಂದ್ರಗಳ ಸಂತ್ರಸ್ಥರ ನಿವೇಶನಗಳು ರಿಯಲ್ ಎಸ್ಟೇಟ್ ಉದ್ಯಮವಾಗಿ ಪರಿವರ್ತಿಸಿ, ಒಂದೇ ಹಕ್ಕು ಪತ್ರಗಳನ್ನು ನಾನಾ ಮಂದಿಗೆ ನೀಡಿದ ಹಗರಣ ಇನ್ನೂ ತನಿಖಾ ಹಂತದಲ್ಲಿದೆ ಎಂದು ಸಂತ್ರಸ್ಥ ಮುಖಂಡರು ಆರೋಪಿಸುತ್ತಾರೆ.

ಪ್ರಭಾರ ಪುನರ್ವಸತಿ ಅಧಿಕಾರಿ ಯಾದ ದಿನೇಶಕುಮಾರ ಅವರನ್ನೇ ಪೂರ್ಣಾವಧಿಯಾಗಿ ಪುನರ್ವಸತಿ ಅಧಿಕಾರಿಯನ್ನಾಗಿ ನೇಮಿಸಿ, ಸಂತ್ರಸ್ತರ ಹಿತ ಕಾಪಾಡಬೇಕೆಂದು ಸಂತ್ರಸ್ತ ಮುಖಂಡರಾದ ವಿಠ್ಠಲ ಉಪ್ಪಾರ, ಹನುಮಂತಪ್ಪ ಢಮನಾಳ, ಮುದಕಪ್ಪ ಕುಂಬಾರ, ನಜೀರ್‌ಸಾಬ್‌ ಮುದ್ದೇಬಿಹಾಳ, ಅರವಿಂದ  ಚಿಮ್ಮ ಲಗಿ, ಮಲ್ಲು ಭಗವತಿ, ಮಳಿಯಪ್ಪ ಪತ್ತಾರ, ಮುನ್ನಾ, ಸಂತೋಷ ಮಹೇಂದ್ರಕರ, ಮುಕುಂದ ಮಹೇಂದ್ರಕರ ಇತರರು ಜನಪ್ರತಿನಿಧಿ ಗಳಿಗೆ, ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.