ADVERTISEMENT

ಬಬಲೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 8:25 IST
Last Updated 25 ಫೆಬ್ರುವರಿ 2012, 8:25 IST

ವಿಜಾಪುರ: ಬಬಲೇಶ್ವರ ಏತ ನೀರಾವರಿಯ ಪರಿಷ್ಕೃತ ಯೋಜನೆಗೆ ಗೋದಾವರಿ ಪೊಲ್ಲಾವರಂ ಕಣಿವೆ ಪ್ರದೇಶದಲ್ಲಿಯ ಉಳಿತಾಯದ ನೀರನ್ನು ಮರು ಹಂಚಿಕೆ ಮಾಡಿ ಈ ಯೋಜನೆಯನ್ನು ಪೂರ್ಣ ಗೊಳಿಸಲಾಗುವುದು ಎಂದು ಶಾಸಕ ಎಂ.ಬಿ. ಪಾಟೀಲ ಹೇಳಿದರು.

ತಾಲ್ಲೂಕಿನ ಬಬಲೇಶ್ವರದಲ್ಲಿ ರೂ.65 ಲಕ್ಷ ವೆಚ್ಚದಲ್ಲಿ ಕೆರೆ  ಪುನರುಜ್ಜೀವನಗೊಳಿಸುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಹಿರಿಯ ಸಹಕಾರಿ ಮುಖಂಡ, ಜಿ.ಪಂ. ಮಾಜಿ ಉಪಾಧ್ಯಕ್ಷ ವಿ.ಎನ್. ಬಿರಾದಾರ ಮಾತನಾಡಿ, 30 ವರ್ಷಗಳ ಹಿಂದೆ ನಿರ್ಮಾಣಗೊಂಡ ಬಬಲೇಶ್ವರ ಕೆರೆಯಲ್ಲಿ ಮಳೆಗಾಲದಲ್ಲಿ ನೀರು ಸಂಗ್ರಹವಾದರೂ ಸೋರಿಕೆಯಿಂದಾಗಿ ಎರಡೇ ತಿಂಗಳಲ್ಲಿ ಕೆರೆ ಖಾಲಿಯಾಗುತ್ತಿದೆ. ಈ ಬಗ್ಗೆ ತಮ್ಮ ಮನವಿಗೆ ಸ್ಪಂದಿಸಿದ ಶಾಸಕರು, ರೂ.65 ಲಕ್ಷ ವೆಚ್ಚದಲ್ಲಿ ಈ ಕೆರೆಯನ್ನು ದುರಸ್ತಿಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಡಾ. ಮಹಾದೇವ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್. ಪಾಟೀಲ, ಶ್ರಿಶೈಲ ಪಾಟೀಲ, ಅಶೋಕ ಕಾಖಂಡಕಿ, ಅಶೋಕ ಪಾಟೀಲ, ಝಡ್.ಎ. ಸೊಲ್ಲಾಪುರ, ಎಂ.ಎ. ಗೌಡರ, ಪ್ರಕಾಶ ನಾಯಕ, ಬಿ.ಜಿ. ಬಿರಾದಾರ, ಬಸವರಾಜ ಯಾದವಾಡ, ಶಿವಾಜಿ ಶಿರೋಳ, ಮಲ್ಲಪ್ಪ ಬಂಗ್ಲೇದ, ಧರ್ಮಣ್ಣ ಭೀಳೂರ ಮತ್ತಿತರರು ಉಪಸ್ಥಿತರಿದ್ದರು.

ಬರಟಗಿ: ಬರಟಗಿ ಹಾಗೂ ಹಂಚಿನಾಳ ಕೆರೆಗಳ ಸುಧಾರಣಾ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಎಂ.ಬಿ. ಪಾಟೀಲ, ಕೆರೆಗಳು ನಮ್ಮ ದೇವಾಲಯಗಳಿದ್ದಂತೆ. ಅವುಗಳನ್ನು ರಕ್ಷಿಸಬೇಕು ಎಂದರು.
ಜಿ.ಪಂ. ಸದಸ್ಯ ದೇವಾನಂದ ಚವ್ಹಾಣ, ತಾ.ಪಂ. ಸದಸ್ಯ ಸಂಗಮೇಶ ದಾಶ್ಯಾಳ,  ಗ್ರಾ.ಪಂ ಅಧ್ಯಕ್ಷ ಕಟಗೇರಿ, ಸಿದ್ದಣ್ಣ ಸಕ್ರಿ, ಪದ್ದು ಚವ್ಹಾಣ, ಸಿದ್ದು ಸಜ್ಜನ, ರಾಮು ಹಂಚಿನಾಳ, ಚಂದ್ರಶೇಖರ ಚವ್ಹಾಣ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.