ADVERTISEMENT

ಬೇವಿನ ಬುಡದಲ್ಲಿ ಲಕ್ಷ್ಮಿಉದ್ಭವ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 8:44 IST
Last Updated 13 ಡಿಸೆಂಬರ್ 2012, 8:44 IST
ಇಂಡಿಯ ಅಗರಖೇಡ ರಸ್ತೆಯಲ್ಲಿರುವ ಬಗಲಿ ಪ್ಲಾಟ್‌ಗಳ ಮಧ್ಯದಲ್ಲಿರುವ ಒಂದು ಬೇವಿನ ಮರದ ಬುಡದಲ್ಲಿ ಲಕ್ಷ್ಮಿ ಉದ್ಭವಿಸಿದ್ದಾಳೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಪಟ್ಟಣದ ಕೆಲವು ಭಕ್ತರು ಅಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಇಂಡಿಯ ಅಗರಖೇಡ ರಸ್ತೆಯಲ್ಲಿರುವ ಬಗಲಿ ಪ್ಲಾಟ್‌ಗಳ ಮಧ್ಯದಲ್ಲಿರುವ ಒಂದು ಬೇವಿನ ಮರದ ಬುಡದಲ್ಲಿ ಲಕ್ಷ್ಮಿ ಉದ್ಭವಿಸಿದ್ದಾಳೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಪಟ್ಟಣದ ಕೆಲವು ಭಕ್ತರು ಅಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.   

ಇಂಡಿ: ಪಟ್ಟಣದ ಅಗರಖೇಡ ರಸ್ತೆಯಲ್ಲಿರುವ ಬಗಲಿ ಪ್ಲಾಟ್‌ಗಳ ಮಧ್ಯದಲ್ಲಿರುವ ಒಂದು ಬೇವಿನ ಮರದ ಬುಡದಲ್ಲಿ ಮಂಗಳವಾರ ಲಕ್ಷ್ಮಿ ಹುಟ್ಟಿಕೊಂಡಿದ್ದಾಳೆ ಎಂಬ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಇಂಡಿ ಪಟ್ಟಣದ ಲಕ್ಷ್ಮಿದೇವಿಯ ಭಕ್ತರು ತಂಡೋಪ ತಂಡವಾಗಿ ಅಲ್ಲಿಗೆ ಭೇಟಿ ನೀಡಿ ಭಕ್ತಿ ಭಾವದಿಂದ ಪೂಜೆ ಸಲ್ಲಿಸಿದರು.

ಕೆಲವರು ಟೆಂಗಿನ ಕಾಯಿ ಒಡೆದು ಭಕ್ತ ತೋರಿಸಿದರೆ ಇನ್ನೂ ಕೆಲವರು ಲಕ್ಷ್ಮಿದೇವಿಗೆ ಉಡಿ ತುಂಬಿ ಭಕ್ತಿ ತೋರಿಸಿದರು.

ಪಟ್ಟಣದಲ್ಲಿ ಇದೊಂದು ಪವಾಡವೆಂಬಂತೆ ಜನ ಸಾಗರ ಹರಿದು ಬಂದಿತ್ತು. ಮಂಗಳವಾರ ಸಂಜೆಯಾಗುತ್ತ ಬಂದರೂ ಕೂಡಾ ಭಕ್ತರ ಭೇಟಿ ಮುಂದುವರಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.