ADVERTISEMENT

ಭಾವೈಕ್ಯ, ಪರಿಸರ ಜಾಗೃತಿಗೆ ಸೈಕಲ್ ಯಾತ್ರೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 9:50 IST
Last Updated 9 ಅಕ್ಟೋಬರ್ 2012, 9:50 IST

ಆಲಮಟ್ಟಿ: ವಿಜಾಪುರದ ಸೈನಿಕ ಶಾಲೆಯ 80 ವಿದ್ಯಾರ್ಥಿಗಳು ಸುವರ್ಣ ವರ್ಷಾಚರಣೆಯು ಅಚ್ಚಳಿಯ ನೆನಪು ಉಳಿಯುವಂತಹ ಸಾಹಸಮಯ ಯೋಜನೆಯಾಗಿ ಗುಮ್ಮಟ ನಗರಿ ವಿಜಾಪುರದಿಂದ ವಿಜಯನಗರ ಅರಸರ ರಾಜಧಾನಿ ಹಂಪಿಯತನಕ ಸುಮಾರು 360 ಕಿ.ಮೀ ದೂರದ ಬೈಸಿಕಲ್ ಯಾತ್ರೆ ಕೈಗೊಂಡಿದ್ದಾರೆ.

 ವಿಜಾಪುರದಿಂದ ಚತುಷ್ಪಥ ಹೆದ್ದಾರಿ ಸಂಖ್ಯೆ 50 ರ ಮೂಲಕ ಹೊರಟಿರುವ ವಿದ್ಯಾರ್ಥಿಗಳ ಜೊತೆಗೆ ಎಂಟು ಜನ ಅಧ್ಯಾಪಕರು ಸಾಥ್ ನೀಡಿದ್ದಾರೆ. ಭಾನುವಾರ ನಿಡಗುಂದಿಯಲ್ಲಿ ವಿಶ್ರಾಂತಿ ಗಾಗಿ ತಂಗಿದಾಗ ಪತ್ರಿಕೆಯೊಂದಿಗೆ ಮಾತನಾಡಿದ ಹಾಸ್ಟೆಲ್ ವ್ಯವಸ್ಥಾಪಕ ಜೋಸೆಫ್ ರಾಜು   `ಸಮಾಜಕ್ಕೆ ಪೂರಕ ವಾದ ಸಂದೇಶಗಳೊಂದಿಗೆ ಈ ಸೈಕಲ್ ಯಾತ್ರೆ ಕೈಗೊಳ್ಳಲಾಗಿದೆ~ ಎಂದರು.

ವಿಜಾಪುರ, ಕೂಡಲಸಂಗಮ. ಬಾದಾಮಿ, ಗದಗ, ಕೊಪ್ಪಳ ಮೂಲಕ ಹಂಪಿಯನ್ನು ಅ. 13 ರಂದು ತಲುಪಲಿರುವ ಯಾತ್ರೆಯ ಸಮಯ ದಲ್ಲಿ ಕೆಲ ಗ್ರಾಮಗಳಲ್ಲಿ ಸಭೆಗಳನ್ನು ಏರ್ಪಡಿಸಲಿದ್ದಾರೆ.

ನಿತ್ಯ 60 ರಿಂದ 70 ಕಿ.ಮೀ. ದೂರವನ್ನು ಕ್ರಮಿಸಲಿರುವ ವಿದ್ಯಾರ್ಥಿಗಳ ಪ್ರತಿ ಸೈಕಲ್ ಮೇಲೆ ಯಾತ್ರೆಯ ಉದ್ದೇಶ ಸಾರುವ ಸಂದೇಶಗಳ ಫಲಕಗಳಿವೆ.

12 ನೇ ತರಗತಿ ಓದುತ್ತಿರುವ ಬೆಳಗಾವಿಯ ವಿದ್ಯಾರ್ಥಿ ಚೆನ್ನಮಲ್ಲಯ್ಯ ಹೇಳುವಂತೆ ಇದೊಂದು ಅವಿಸ್ಮರಣೀ ಯ ಯಾತ್ರೆ. ರಾಷ್ಟ್ರೀಯ ಭಾವೈಕ್ಯತೆಗೆ ದೊಡ್ಡ ಸವಾಲುಗಳಿವೆ. ಭಾಷೆ ನದಿ ಗಡಿಗಳ ಹೆಸರಿನಲ್ಲಿ ನಮ್ಮ ನಮ್ಮ ಪ್ರಾಂತಗಳ ಜನರಲ್ಲಿ ಜಗಳವಾಗುತ್ತಿವೆ, ಇದೊಂದು ದುರಂತವೇ ಸರಿ ಎಂದರು.
ಮಂಜುನಾಥ  ಪ್ರಕಾರ, ಇಂದು ಯುವ ಜನರು ದುಶ್ಚಟಗಳಿಗೆ ಬಲಿ ಯಾಗಿ ಆರೋಗ್ಯ ಹಾಳು ಮಾಡಿ ಕೊಳ್ಳುತ್ತಿದ್ದಾರೆ.

ತಂಬಾಕು ಸೇವನೆ, ಧೂಮಪಾನ, ಡ್ರಗ್ಸ್‌ನಂತಹ ಕೆಟ್ಟ ವ್ಯಸನಗಳಿಂದ ದೂರವಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಯುವ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಸೈಕಲ್‌ಮೂಲಕ, ಉತ್ತಮ ಉದ್ದೇಶ ದೊಂದಿಗೆ  ಯಾತ್ರೆ ಕೈಗೊಂಡಿರುವುದು  ಮರೆಯಲಾಗದ ಕ್ಷಣವಾಗಲಿದೆ ಎಂದು ಪ್ರದೀಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.