ADVERTISEMENT

ಮತ್ತೆ ಮಳೆ: ಮನೆಯೊಳಕ್ಕೆ ನೀರು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2014, 5:22 IST
Last Updated 8 ಮಾರ್ಚ್ 2014, 5:22 IST
ಮುದ್ದೇಬಿಹಾಳದಲ್ಲಿ ಶುಕ್ರವಾರ ಸುರಿದ ಭಾರಿ ಮಳೆಯಿಂದ ಪಿಲೇಕಮ್ಮ ನಗರದಲ್ಲಿ ಮಳೆ ನೀರು ರಸ್ತೆ ತುಂಬಿ ಜನರು ಓಡಾಡಲು ಪರದಾಡಬೇಕಾಯಿತು
ಮುದ್ದೇಬಿಹಾಳದಲ್ಲಿ ಶುಕ್ರವಾರ ಸುರಿದ ಭಾರಿ ಮಳೆಯಿಂದ ಪಿಲೇಕಮ್ಮ ನಗರದಲ್ಲಿ ಮಳೆ ನೀರು ರಸ್ತೆ ತುಂಬಿ ಜನರು ಓಡಾಡಲು ಪರದಾಡಬೇಕಾಯಿತು   

ಮುದ್ದೇಬಿಹಾಳ: ಪಟ್ಟಣದಲ್ಲಿ ಶುಕ್ರವಾರ ಮಧ್ಯಾಹ್ನ ಮತ್ತೆ ಭಾರಿ ಮಳೆ ಸುರಿದು ಅನೇಕ ಕಡೆ ಮಳೆ ನೀರು ಮನೆಗೆ ನುಗ್ಗಿದ ಪ್ರಸಂಗ ನಡೆಯಿತು. ಸುಮಾರು ಒಂದು ಗಂಟೆಗಳ ಕಾಲ ಸಿಡಿಲು, ಗುಡುಗು, ಭಾರಿ ಗಾಳಿ ಸಮೇತ ಸುರಿದ ಮಳೆಯಿಂದ ಎಲ್ಲ ರಸ್ತೆಗಳಲ್ಲಿ ಮಳೆ ನೀರು ತುಂಬಿ ಹರಿಯಿತು. ಪಿಲೇಕಮ್ಮ ನಗರದಲ್ಲಿ ನೀರು ಧಾರಾಕಾರವಾಗಿ ಹರಿದು ಜ್ಞಾನಭಾರತಿ ಶಾಲೆಯ ಹಿಂದಿರುವ ಶಿವು ಭಜಂತ್ರಿ, ಮಲ್ಲಣ್ಣ ಹಡಪದ, ಹಾದಿಮನಿ, ಅಂಬಿಗೇರ, ಎನ್‌.ಆರ್. ನಾಯಕ, ಪಾದಗಟ್ಟಿ ಅವರ ಮನೆಗೆ ನೀರು ನುಗ್ಗಿ ತೀವ್ರ ತೊಂದರೆ ಅನುಭವಿಸುವಂತಾಯಿತು.

ಅಲ್ಲಿಯ ನಿವಾಸಿಗಳು ಪ್ರಜಾವಾಣಿ ಪ್ರತಿನಿಧಿ ಯೊಂದಿಗೆ ಮಾತನಾಡಿ, ಮಳೆಯಾದಾ ಗೊಮ್ಮೆ ಇಲ್ಲಿಯ ನಿವಾಸಿಗಳಿಗೆ ವಿಪರೀತ ತೊಂದರೆ ಯಾಗುತ್ತದೆ, ಪುರಸಭೆಯವರಿಗೆ ನೀರು ಹರಿದು ಹೋಗುವಂತೆ ಮಾಡಿ ಎಂದರೂ ಮಾಡುತ್ತಿಲ್ಲ ಎಂದು ದೂರಿದರು.

ಇಂದಿರಾ ವೃತ್ತದಲ್ಲಿ ಅನೇಕ ಕಡೆ ಮನೆಗಳಿಗೆ ಮಳೆಯ ನೀರು ನುಗ್ಗಿದೆ. ಬನಶಂಕರಿ ನಗರದಲ್ಲಿ ನಾರಾಯಣ ಮಾಯಾಚಾರಿ ಅವರ ಮನೆ ಮಳೆಯಿಂದ ಕುಸಿದು ಬಿದ್ದಿದೆ, ಪಟ್ಟಣದ ಹುಡ್ಕೋ ದ್ವಾರದ ಬಳಿ ಅಪಾರ ಪ್ರಮಾಣದ ನೀರು ನಿಂತಿದ್ದರಿಂದ ಜೇ.ಸಿ. ಶಾಲೆಯ ಮಕ್ಕಳು ಮನೆಗೆ ಹೋಗಲಾಗದೇ ಚಡಪಡಿಸಿದ ಪ್ರಸಂಗ ನಡೆಯಿತು.

ಆಲಮಟ್ಟಿ ರಸ್ತೆಯಲ್ಲಿ ಗುಂಡಪ್ಪ ಬಡಿಗೇರ ಅವರ ಮನೆಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಹುಡ್ಕೋ ಬಡಾವಣೆಯಲ್ಲಿ  ಕೆಲವು ಮರಗಳು ಉರುಳಿ ಬಿದ್ದ ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.