ವಿಜಾಪುರ: ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯವನ್ನು ದೇಶದಲ್ಲಿಯೇ ಮಾದರಿಯಾಗಿ ರೂಪಿಸುವ ನಿಟ್ಟಿನಲ್ಲಿ ಎಲ್ಲರೂ ಪರಸ್ಪರ ವಿಶ್ವಾಸ ಮತ್ತು ಶ್ರದ್ಧೆಯಿಂದ ಕೆಲಸ ಮಾಡಿ ಸಹಕರಿಸ ಬೇಕು ಎಂದು ನೂತನ ಕುಲಪತಿ ಪ್ರೊ.ಮೀನಾ ಚಂದಾವರಕರ ಮನವಿ ಮಾಡಿದರು.
ಮಹಿಳಾ ವಿವಿಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿ, ನಾವೆ ಲ್ಲರೂ ಒಂದು ಕುಟುಂಬದ ಸದಸ್ಯರು ಎಂಬ ಭಾವನೆಯಿಂದ ಕೆಲಸ ಮಾಡಿ ದಾಗ ಅಸಾಧ್ಯವಾದುದನ್ನೂ ಸಾಧ್ಯ ಮಾಡಿ ತೋರಿಸಬಹುದು ಎಂದರು.
`ವಿಶ್ವವಿದ್ಯಾಲಯವನ್ನು ಕಟ್ಟುವುದು ಅತ್ಯಂತ ಸವಾಲಿನ ಕೆಲಸ. ಈ ಕಾರ್ಯ ದಲ್ಲಿ ಎಂಥದೇ ಸಮಸ್ಯೆ, ಸವಾಲುಗಳು ಎದುರಾದರೂ ಅವುಗಳನ್ನು ಸಮಚಿತ್ತ ದಿಂದ ಬಗೆಹರಿಸಿಕೊಂಡು ಮಹಿಳಾ ವಿವಿಯನ್ನು ಔನ್ನತ್ಯದ ಕಡೆಗೆ ಕೊಂಡೊಯ್ಯಲು ಎಲ್ಲರೂ ಒಂದು ತಂಡವಾಗಿ ಕಾರ್ಯ ನಿರ್ವಹಿಸುವುದು ಅಗತ್ಯವಾಗಿದೆ~ ಎಂದು ಹೇಳಿದರು.
ಹಂಗಾಮಿ ಕುಲಪತಿಯಾಗಿದ್ದ ಪ್ರೊ. ಎಸ್.ಎ. ಖಾಜಿ ಅವರನ್ನೂ ಸನ್ಮಾನಿಸ ಲಾಯಿತು. ಕುಲಸಚಿವ ಪ್ರೊ.ಜಿ.ಅರ್. ನಾಯಿಕ, ಕುಲಸಚಿವೆ ಮೌಲ್ಯಮಾಪನ ಪ್ರೊ.ಡಿ.ಎಚ್. ತೇಜಾವತಿ, ಹಣಕಾಸು ಅಧಿಕಾರಿ ಡಾ.ಆರ್. ಸುನಂದಮ್ಮ, ಅಧ್ಯಾಪಕರ ಸಂಘದ ಅಧ್ಯಕ್ಷೆ ಡಾ.ಎಸ್.ಎಸ್. ವಿಜಯಾದೇವಿ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.ಶಿಕ್ಷಣ ವಿಭಾಗದ ಪ್ರಭಾರ ಮುಖ್ಯಸ್ಥ ಡಾ.ವಿ.ವಿ. ಮಳಗಿ ಸ್ವಾಗತಿಸಿ ದರು. ಸಹ ಪ್ರಾಧ್ಯಾಪಕ ಡಾ.ಎಂ.ಬಿ. ದಿಲ್‌ಷಾದ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.