ADVERTISEMENT

ರಸ್ತೆ ಅಪಘಾತ: ದಂಪತಿ ಸಾವು

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2012, 4:25 IST
Last Updated 18 ಆಗಸ್ಟ್ 2012, 4:25 IST

ವಿಜಾಪುರ: ದೇವರ ದರ್ಶನಕ್ಕೆ ಬೈಕ್ ಮೇಲೆ ಹೊರಟಿದ್ದ ದಂಪತಿ ರಸ್ತೆ ಅಪಘಾತದಲ್ಲಿ  ಮೃತಪಟ್ಟ ಘಟನೆ ವಿಜಾಪುರ ಹಾಗೂ ಹೊರ್ತಿ ಮಾರ್ಗ ಮಧ್ಯ ಶುಕ್ರವಾರ ಸಂಭವಿಸಿದೆ.

ವಿಜಾಪುರ ವಿಭಾಗದ ಕೆ.ಎಸ್.ಆರ್.ಟಿ.ಸಿ. ಸಂಸ್ಥೆಯ ನಿರ್ವಾಹಕ  ವಿರೂಪಾಕ್ಷಿ(ಸುಭಾಷ) ಗುರುಪಾದಪ್ಪ ಕೊಳ್ಳುರಗಿ (55) ಹಾಗೂ ಅವರ ಪತ್ನಿ ಶಿಕ್ಷಕಿ ಕವಿತಾ ವಿರೂಪಾಕ್ಷಪ್ಪ ಕೊಳ್ಳುರಗಿ (47) ಮೃತಪಟ್ಟಿದ್ದಾರೆ. ಹೊರ್ತಿ ರೇವಣಸಿದ್ಧೇಶ್ವರ ದೇವರ ದರ್ಶನಕ್ಕೆ ವಿಜಾಪುರದಿಂದ ಹೊರ್ತಿಗೆ ಹೊರಟಿದ್ದಾಗ ಲಾರಿ ಡಿಕ್ಕಿ ಹೊಡೆದಿದೆ. ಹೋರ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.