ADVERTISEMENT

ವಿಟಿಯು ಕುಲಪತಿ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2011, 9:50 IST
Last Updated 11 ಮಾರ್ಚ್ 2011, 9:50 IST
ವಿಟಿಯು ಕುಲಪತಿ ವಿರುದ್ಧ ಪ್ರತಿಭಟನೆ
ವಿಟಿಯು ಕುಲಪತಿ ವಿರುದ್ಧ ಪ್ರತಿಭಟನೆ   

ವಿಜಾಪುರ: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ಕುಲಪತಿ ಡಾ.ಮಹೇಶಪ್ಪ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನವರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಮೆರವಣಿಗೆಯಲ್ಲಿ ಆಗಮಿಸಿ ಇಲ್ಲಿಯ ಬಂಜಾರಾ ಕ್ರಾಸ್‌ನಲ್ಲಿ ರಸ್ತೆ ತಡೆ ನಡೆಸಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು. 
ವಿಭಾಗ ಸಂಘಟನಾ ಕಾರ್ಯದರ್ಶಿ ರಮೇಶ ಕೆ. ಮಾತನಾಡಿ, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗಳು ವಿವಾದಕ್ಕೊಳಗಾಗಿದ್ದಾರೆ. ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಎ.ಬಿ.ವಿ.ಪಿ.ಯ ವಿಭಾಗ ಕಾರ್ಯಾಲಯ ಕಾರ್ಯದರ್ಶಿ ಶ್ರೀಮಂತ ಕಟ್ಟಿ ಮಾತನಾಡಿದರು.  ನಂತರ ಜಿಲ್ಲಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.  ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವಕುಮಾರ, ಜಿಲ್ಲಾ ಸಂಚಾಲಕ ಸಿದ್ದು ಮದರಖಂಡಿ, ಹೋರಾಟ ಸಂಚಾಲಕ ರೋಹಿತ ಶಿಂಧೆ, ಸುರೇಶ ಮಾಲಶೆಟ್ಟಿ, ಆನಂದ, ಅಶೋಕ, ಅಶ್ವಿನ್, ವಿಶ್ವನಾಥ, ಶಾಂತಿನಾಥ ಅಸ್ಕಿ, ನಬಿಖಾನ್ ಎಂ.ಕೆ., ಸಾಗರ, ರಾಮು ಶ್ರೀಶೈಲ ಲದ್ದಿಮಠ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ವಿಮುಕ್ತ ಸಮುದಾಯಗಳ ಒಕ್ಕೂಟಕ್ಕೆ ಆಯ್ಕೆ
ವಿಜಾಪುರ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಅಲೆಮಾರಿ, ಅರೆ-ಅಲೆಮಾರಿ ವಿಮುಕ್ತ ಸಮುದಾಯಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷರಾಗಿ ಶಿವಾನಂದ ಪಾಚಂಗಿ ಆಯ್ಕೆಗೊಂಡಿದ್ದಾರೆ.

ವಿ. ನಾಗಪ್ಪ, ವಿ.ಡಿ. ಮಧುಕರ (ಉಪಾಧ್ಯಕ್ಷರು), ಎಸ್. ರಾಮಸ್ವಾಮಿ (ಪ್ರಧಾನ ಕಾರ್ಯದರ್ಶಿ), ಮಂಜುಳಾ ಜಿ. (ಸಹ ಕಾರ್ಯದರ್ಶಿ), ಎ.ರಾಮು ಗೋಸಾಯಿ (ಕೋಶಾಧ್ಯಕ್ಷ), ಗಿರಿಯಪ್ಪ ಗೊಲ್ಲರ, ಸುರೇಶ ಮೋಕಲಾಜಿ (ಸಂಘಟನಾ ಕಾರ್ಯದರ್ಶಿಗಳು), ಚಂದ್ರಶೇಖರ ರೊಡ್ನವರ (ಕಾನೂನು ಸಲಹೆಗಾರ), ವಿಶ್ವನಾಥ ಬೈಲಪತ್ತಾರ, ಅರ್ಜುನ ಮೋಕಲಾಜಿ, ಅನಿಲಕುಮಾರ ಮೋಕಲಾಜಿ (ನಿರ್ದೇಶಕರು) ಅವರು ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.