ADVERTISEMENT

ಸಂಭ್ರಮದ ಪದ್ಮಾವತಿದೇವಿ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2012, 8:25 IST
Last Updated 17 ಮಾರ್ಚ್ 2012, 8:25 IST

ಮುದ್ದೇಬಿಹಾಳ: ಪಟ್ಟಣದಲ್ಲಿ ಪದ್ಮಾವತಿದೇವಿ ಜಾತ್ರಾ ಮಹೋತ್ಸವವು ಭಕ್ತಿ, ಶ್ರದ್ಧೆಯಿಂದ ನೆರವೇರಿತು. ಬೆಳಿಗ್ಗೆ ಪಾರ್ಶ್ವನಾಥ ಬಸದಿಯಿಂದ ಆರಂಭವಾದ ಪದ್ಮಾವತಿದೇವಿ ಪಲ್ಲಕ್ಕಿ ಉತ್ಸವವು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಹಾಯ್ದು ಗುಡ್ಡದ ಪದ್ಮಾವತಿದೇವಿ ದೇವಸ್ಥಾನ ತಲುಪಿತು.

ಮೆರವಣಿಗೆಯುದ್ದಕ್ಕೂ ಅಹಿಂಸಾ ಪರಮೋಧರ್ಮ ಕೀ ಜೈ, ಸಿದ್ಧಾಂತ ಶಾಸ್ತ್ರಕ್ಕೆ ಜೈ, ಮಹಾವೀರನಿಗೆ ಜೈ, ಶ್ರೀ ಪದ್ಮಾವತಿದೇವಿಗೆ ಜೈ ಎನ್ನುವ ಘೋಷಣೆಗಳು ಮೊಳಗಿದವು.

ದೇವಸ್ಥಾನದ ಆವರಣದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಶಾಸಕ ಸಿ.ಎಸ್. ನಾಡಗೌಡ ನೆರವೇರಿಸಿ ಮಾತನಾಡುತ್ತ, ಜೈನ ಮುನಿಗಳು ಹೇಳಿದ ಅಹಿಂಸಾ ಪರಮೋಧರ್ಮದ ತತ್ವಗಳನ್ನು ಜಗತ್ತಿನಾದ್ಯಂತ ಅನುಸರಿಸಿದರೆ ಯುದ್ಧಗಳೇ ಇಲ್ಲವಾಗುತ್ತವೆ, ಶಾಂತಿ, ಸಮಾಧಾನ ನೆಲೆಸಿ, ನಾಡು ಸುಭಿಕ್ಷವಾಗುತ್ತದೆ ಎಂದು ಹೇಳಿದರು.

ಸಭೆಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಮಂಗಳಾದೇವಿ ಬಿರಾದಾರ, ಪ್ರಭು ಕಡಿ, ಪ್ರಭು ದೇಸಾಯಿ, ಅರವಿಂದ ಕೊಪ್ಪ, ಅನಂತರಾಜ ಉಪಾಧ್ಯ, ಅನಿಲ ಹಜಾರೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಿ.ಎನ್.ಪಾಟೀಲ, ಪದ್ಮರಾಜ ದಂಡಾವತಿ, ಬಾಬು ಗೋಗಿ, ಗಂಗಣ್ಣ ಸುರಪುರ, ಸುಧೀರ ಹಜಾರೆ, ಭುಜಪ್ಪಶೆಟ್ಟಿ ಮುಂಡೇರಾವ, ಅಪ್ಪಾಸಾಬ ನಾಡಗೌಡ ಮೊದಲಾದವರನ್ನು ಸನ್ಮಾನಿಸಲಾಯಿತು. ಶ್ರೀ ಪದ್ಮಾವತಿದೇವಿ ಸಂಘದ ಅಧ್ಯಕ್ಷ ಶಾಂತಿನಾಥ ದಂಡಾವತಿ, ಜೈಪಾಲ ಶೆಟ್ಟಿ, ರವಿ ದಂಡಾವತಿ, ಮಾಣಿಕಚಂದ ದಂಡಾವತಿ, ರತ್ನಪ್ಪ ಮಂಕಣಿ ಉಪಸ್ಥಿತರಿದ್ದರು.

ಅಶೋಕ ಮಣಿ ಕಾರ್ಯಕ್ರಮ ನಿರೂಪಿಸಿದರು. ರಾಜು ದಂಡಾವತಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.