ADVERTISEMENT

ಸಮಗ್ರ ನೀರಾವರಿಗೆ ಆದ್ಯತೆ: ಬೆಳ್ಳುಬ್ಬಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2012, 8:40 IST
Last Updated 7 ಆಗಸ್ಟ್ 2012, 8:40 IST

ಇಂಡಿ: ವಿಜಾಪುರ ಜಿಲ್ಲೆಗೆ ಸಚಿವ ಸ್ಥಾನ ನೀಡಿ ಆ ಕೊರತೆಯನ್ನು ಸರ್ಕಾರ ನೀಗಿ ಸಿದ್ದು, ಇನ್ನು ಸಂಪೂರ್ಣ ನಿರಾವರಿ ಜಿಲ್ಲೆ ಯನ್ನಾಗಿ ಮಾಡುವ ಸಂಕಲ್ಪ ತೊಟ್ಟಿ ್ದದೇನೆ ಎಂದು ಕೃಷಿ ಮಾರುಕಟ್ಟೆ ಸಚಿವ ಎಸ್.ಕೆ.ಬೆಳ್ಳುಬ್ಬಿ ಭರವಸೆ ನೀಡಿದರು. 

 ತಾಲ್ಲೂಕಿನ ಹೋರ್ತಿ ಗ್ರಾಮದಲ್ಲಿ ರೇವಣಸಿದ್ದೇಶ್ವರ ದೇವಸ್ಥಾನದ ದ್ವಾರ ಬಾಗಿಲಿನ ಭೂಮಿ ಪೂಜೆ ಮತ್ತು ನೂತನ ರಥೋತ್ಸವಕ್ಕೆ ಸೋಮವಾರ ಚಾಲನೆ ನೀಡಿದ ಅವರು, ನಂತರ ದೇವರ ಕುರಿತಾದ ಕ್ಯಾಸೆಟ್ ಬಿಡುಗಡೆ ಗೊಳಿಸಿ ಮಾತನಾಡಿದರು.

ಮುಳವಾಡ ಏತ ನೀರಾವರಿ ಯೋಜ ನೆಗೆ ಸರ್ಕಾರ 108 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಅದರ ಕಾಮಗಾರಿ ಭರದಿಂದ ಸಾಗಿದೆ. ಜಿಲ್ಲೆಯ ಮಸೂತಿ ಮತ್ತು ಹತ್ತರಕಿಹಾಳ ಗ್ರಾಮಗಳಲ್ಲಿ ಮುಳವಾಡ ಏತ ನೀರಾವರಿಯ ಯೋಜನೆಗೆ ಸರ್ಕಾರ 927 ಕೋಟಿ, ರೂ, ಗಳನ್ನು ತೆಗೆದಿರಿಸಿದೆ. ಮಲಘಾಣ ಮತ್ತು ಮಸಿಬಿನಾಳ ಗ್ರಾಮಗಳಲ್ಲಿಯ ನೀರಾವರಿ ಯೋಜನೆಗಳಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಮುಳವಾಡ ಏತ ನೀರಾವರಿಯಿಂದ ಒಟ್ಟು 7 ಲಕ್ಷ ಎಕರೆಗೆ ನೀರುಣಿಸುವ ವ್ಯವಸ್ಥೆ ಮಾಡಲಾಗು ವುದು ಎಂದರು.

ವಿಜಾಪುರ ಜಿಲ್ಲೆಯ 33 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸರ್ಕಾರ ಮುಂದಾಗಿದೆ. ಈಗಾಗಲೇ ಅಣಚಿ ಪ್ಯಾಕೇಜಿನ ಕಾರ್ಯಕ್ಕೆ ಟೆಂಡರ್ ಕರೆಲಾಗಿದ್ದು, ಆ ಕಾಮಗಾರಿಗೆ ಇದೇ 11 ರಂದು ಮುಖ್ಯಮಂತ್ರಿ ಜಗದೀಶಶೆಟ್ಟರ್ ಭೂಮಿ ಪೂಜೆ ನೆರವೇರಿಸ ಲಿದ್ದಾರೆ. ಇನ್ನುಳಿದ ಪ್ಯಾಕೇಜುಗಳಿಗೆ ಹಣ ಬಿಡುಗಡೆ ಮಾಡಲಾಗುವದು ಎಂದರು. ಹಿಂದಿನ ಮುಖ್ಯಮಂತ್ರಿ ಸದಾನಂದ ಗೌಡರು ಅವಳಿ ಜಿಲ್ಲೆಗೆ 17,000 ಕೋಟಿ  ರೂಪಾಯಿ ವ್ಯಯಿಸಲು ತಾತ್ವಿಕ ಒಪ್ಪಿಗೆ ನೀಡಿದ್ದಾರೆ.

ಈ ಹಣದಲ್ಲಿ 15000 ಕೋಟಿ ರೂಪಾಯಿಯನ್ನು ವಿಜಾಪುರ ಜಿಲ್ಲೆಗೆ ವ್ಯಯಿಸಲಾಗುತ್ತದೆ. ಬರಗಾಲ ಕಾಮ ಗಾರಿಗೆ ಹಣದ ಕೊರತೆಯಿಲ್ಲ ಎಂದು ಹೇಳಿದ ಅವರು ಅಭಿವೃದ್ಧಿ ಕಾಮ ಗಾರಿಗಳಿಗೆ ಶಾಸಕರು ಪಕ್ಷಬೇಧ ಮರೆತು ಸಹಕಾರ ನೀಡುವಂತೆ ಸಲಹೆ ನೀಡಿ ದರು. ಅಂಗವಿಕಲರಿಗೆ, ವೃದ್ಧರಿಗೆ, ವಿಧವೆ ಯರಿಗೆ ನೀಡಬೇಕಿದ್ದ ಮಾಶಾಸನ ಬಿಡುಗಡೆ ಮಾಡಲಾಗಿದೆ. ಸುವರ್ಣ ಭೂಮಿ ಯೋಜನೆ ಮುಂದುವರೆಸಲಾ ಗಿದೆ. ಆಲಮಟ್ಟಿ ಆಣೆಕಟ್ಟೆ ಸಂಪೂರ್ಣ ಭರ್ತಿಯಾಗಿದೆ ಎಂದರು.

ಸತ್ಯಾಗ್ರಹ ಹಿಂದೆ ಪಡೆಯಲು ಮನವಿ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇದೇ 16 ರಿಂದ ರೈತರು ನಡೆಸಲು ಉದ್ದೇಶಿಸಿರುವ ಸತ್ಯಾಗ್ರಹ ವನ್ನು ವಾಪಸ್ ಪಡೆದುಕೊಳ್ಳಬೇಕು. ರೈತರಿಗಾಗಿಯೇ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ. ವಿಜಾಪುರ ಜಿಲ್ಲೆಯ ಎಲ್ಲಾ ನೀರಾವರಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿದೆ ಎಂದ ಅವರು ಸತ್ಯಾಗ್ರಹ ಕೈ ಬಿಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಾಸಕ ಡಾ. ಸಾರ್ವಭೌಮ ಬಗಲಿ, ರೇವಣಸಿದ್ದೇ ಶ್ವರ ಸಂಸ್ಥೆಯ ಅಧ್ಯಕ್ಷ ಅಣ್ಣಪ್ಪ ಖೈನೂರ, ಎಂ.ಆರ್.ಪಾಟೀಲ, ಮಾಜಿ ಶಾಸಕ ಆರ್.ಕೆ.ರಾಠೋಡ, ಶ್ರೆಮಂತ ಇಂಡಿ, ಸುರೇಶ ಬೇನಾಳ, ಪ್ರೊ.ಎಸ್.ಜಿ. ಸಾಹು ಕಾರ, ಪ್ರಾಚಾರ್ಯ ಬಿ.ಸಿ. ದೊಡಮನಿ, ಎಸ್.ಎಸ್.ಪೂಜಾರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.