ADVERTISEMENT

ಸಾಮೂಹಿಕ ವಿವಾಹ ಪ್ರೋತ್ಸಾಹಿಸಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2011, 6:20 IST
Last Updated 14 ಏಪ್ರಿಲ್ 2011, 6:20 IST

ತಾಳಿಕೋಟೆ: ಸಾಮೂಹಿಕ ವಿವಾಹ ದಿಂದ ಒಣ ಪ್ರತಿಷ್ಠೆಗಳು ಅಡಗಿ ಸಮಾನತೆ ನೆಲೆಸುವುದಲ್ಲದೆ ಬಡವರಿಗೆ ಆರ್ಥಿಕ ಹೊರೆ ತಪ್ಪಿಸಿ ಸಾಲದ ಶೂಲದಲ್ಲಿ ಬಳಲುವುದನ್ನು ತಪ್ಪಿಸು ತ್ತದೆ ಎಂದು ದೇವರ ಹಿಪ್ಪರಗಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅಭಿಪ್ರಾಯಪಟ್ಟರು.

ಅವರು ಇಲ್ಲಿಗೆ ಸಮೀಪದ ಹಗರಗುಂಡ ಗ್ರಾಮದಲ್ಲಿ ಇಚೇಗೆ ನಡೆದ ಸೋಮನಾಥೇಶ್ವರ ನೂತನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಸರ್ವ ಧರ್ಮ ಸಮ್ಮೇಳನ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಂಕ್ರುಬಾಯಿ ಬಸವರಾಜ ಚಲವಾದಿ ಮಾತನಾಡಿ, ಸತಿ-ಪತಿಗಳ ಭಕ್ತಿ ಒಂದಾದಲ್ಲಿ ಶಿವನಿಗರ್ಪಿತವೆಂಬ ಶರಣರ ವಾಣಿಯಂತೆ ಅರಿತು, ಬೆರೆತು ಸಂಸಾರ ನಡೆಸಿ ಸಮಾಜಕ್ಕೆ ಮಾದರಿ ಯಾಗಿ ಎಂದು ಹಾರೈಸಿದರು.ಸಾನ್ನಿಧ್ಯ ವಹಿಸಿದ್ದ ಕುಂಟೋಜಿಯ ಸಂಸ್ಥಾನಮಠದ ಚನ್ನವೀರದೇವರು ಹಾಗೂ ಕೆಸರಟಗಟಿಯ ಸೋಮಲಿಂಗ ಮಹಾರಾಜರು ಆಶೀರ್ವಚನ ನೀಡಿದರು.

ವೇದಿಕೆಯಲ್ಲಿ ಜಿ.ಪಂ. ಸದಸ್ಯರಾದ  ಸಾಯಬಣ್ಣ ಆಲ್ಯಾಳ, ದೇವಮ್ಮ ನಿಂ. ಬಪ್ಪರಗಿ, ಮಂಜುಳಾ ಕರಬಂಟನಾಳ, ಮಾಜಿ ಸದಸ್ಯರಾದ ಹೇಮರೆಡ್ಡಿ ಮೇಟಿ, ನಿಂಗಪ್ಪಗೌಡ ಬಪ್ಪರಗಿ, ತಾ.ಪಂ. ಸದಸ್ಯರಾದ ಗಿರೆವ್ವಾ ರಾಠೋಡ, ವೀರೇಶ ಬಾಗೇವಾಡಿ, ಮುದ್ದೇಬಿಹಾಳ ತಾಲ್ಲೂಕು ಬಿಜೆಪಿ  ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಆರ್.ಬಿ.ಪಾಟೀಲ, ಪ್ರಭು ದೇಸಾಯಿ ಬಸನಗೌಡ ಬಿರಾದಾರ, ಬಸಪ್ಪ ಹೊಸಗೌಡರ, ಅಪ್ಪು ದೇಶಮುಖ, ಮಲ್ಲೇಶಪ್ಪ  ಸಾಹೇಬಗೌಡ ಮಕಾಶಿ ಮೊದಲಾದವರಿದ್ದರು.

ಬಹುಮಾನ ವಿತರಣೆ: ಈ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಕ್ರಿಕೆಟ್ ಟೂರ್ನಾಮೆಂಟ್‌ನಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಹಾಗೂ ಸದಸ್ಯರನ್ನು, ತಾ.ಪಂ. ಸದಸ್ಯರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.