ADVERTISEMENT

ಸಾಹಸ ಮೆರೆದ ಮುಳಸಾವಳಗಿ ದಾನಪ್ಪ ಪಾಟೀಲ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2012, 12:10 IST
Last Updated 11 ನವೆಂಬರ್ 2012, 12:10 IST

ವಿಜಾಪುರ: ವಿಶ್ವ ವಿಖ್ಯಾತ ಮೈಸೂರು ದಸರಾ ಉತ್ಸವದ ಅಂಗವಾಗಿ ಈ ಬಾರಿ ಮೈಸೂರಿನ ಒಯಲ್ ಮೈದಾನದಲ್ಲಿ ನಡೆದ ಶಕ್ತಿ ಪ್ರದರ್ಶನದಲ್ಲಿ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಮುಳಸಾವಳಗಿ ಗ್ರಾಮದ ರಮೇಶ ದಾನಪ್ಪ ಪಾಟೀಲ ಪ್ರಥಮ ಸ್ಥಾನ ಪಡೆದು ಸಾಧನೆ ಪಡೆದು ಜಿಲ್ಲೆಯ ಕೀರ್ತಿ ಪತಾಕೆ ಹಾರಿಸಿದ್ದಾರೆ.

107 ಕೆ.ಜಿ. ಭಾರವಾದ ಹಾರಿಗಳನ್ನು ಹಲ್ಲಿನಿಂದ ಎತ್ತಿ ಮೇಲೆ ಹಾರಿಸುವುದು, 170 ಕೆ.ಜಿ. ಹಾರಿಯನ್ನು ಕೈಗೆ ಕಟ್ಟಿ ಮಲಗಿ ಎದ್ದು ನಿಲ್ಲುವುದರಲ್ಲಿ ಪ್ರಥಮ ಸ್ಥಾನ ಪಡೆದ ಸಂದರ್ಭದಲ್ಲಿ ನೆರೆದ ಲಕ್ಷಾಂತರ ಜನರು ಚಪ್ಪಾಳೆ ಗಿಟ್ಟಿಸಿ ಹುರುದುಂಬಿಸಿದರು.

ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಅವರ ಮೂಲಕ ದಸರಾ ಉತ್ಸವದಲ್ಲಿ ಭಾಗವಹಿಸಲು ಅವಕಾಶ ಗಿಟ್ಟಿಸಿಕೊಂಡ ಈ ಸ್ಪರ್ಧೆಯಲ್ಲಿ ಭಾಗವಹಿಸಿ, ರೂ. 25 ಸಾವಿರ ಪ್ರಥಮ ಬಹುಮಾನ ಪಡೆದರು. ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾಧಿಕಾರಿ ಪಿ.ಎಸ್. ವಸ್ತ್ರದ, ಡಿ. ರವಿಕುಮಾರ, ರವಿಶಂಕರ, ಹೇಮಂತಕುಮಾರ, ಸುರೇಶಕುಮಾರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.