ADVERTISEMENT

`ಸ್ಮಶಾನ ಜಾಗ ಕೊಳಚೆ ಪ್ರದೇಶ ಘೋಷಣೆ ಕಷ್ಟ'

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 6:07 IST
Last Updated 17 ಜುಲೈ 2013, 6:07 IST

ಸಿಂದಗಿ: ವಿದ್ಯಾನಗರ ಬಡಾವಣೆ ಹಿಂದೆ ಇರುವ ಎಂಟು ಎಕರೆ ಸ್ಮಶಾನ ಜಾಗವನ್ನು `ಕೊಳಚೆ ಪ್ರದೇಶ' ಎಂದು ಘೋಷಣೆ ಮಾಡುವಂತೆ ಅಲ್ಲಿನ ನಿವಾಸಿಗಳು ಆಗ್ರಹಿಸಿರುವುದು ನ್ಯಾಯೋಚಿತ ಎನಿಸಿದರೂ ಈ ಪ್ರದೇಶವನ್ನು ಕೊಳಚೆ ಪ್ರದೇಶ ಎಂದು ಘೋಷಣೆ ಮಾಡುವುದಕ್ಕೆ ಸಾಕಷ್ಟು ಕಾನೂನು ತೊಡಕುಗಳಿವೆ ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಗಂಗೂಬಾಯಿ ಮಾನಕರ ಹೇಳಿದರು.

ಭಾನುವಾರ ಸಂಜೆ ನಗರದ ವಿದ್ಯಾ ನಗರ ಬಡಾವಣೆಯಲ್ಲಿನ ಜೋಪಡ ಪಟ್ಟಿ ಪ್ರದೇಶಕ್ಕೆ ಹಠಾತ್‌ನೆ ಭೇಟಿ ನೀಡಿದ ಮಾನಕರ ಅವರು ಪ್ರತಿ ಮನೆ, ಮನೆಗೂ ತೆರಳಿ ವಾಸ್ತವ ಹೇಳಿಕೆ ಗಳನ್ನು ಸಂಗ್ರಹಿಸಿಕೊಂಡರು.

ನಂತರ ಮಾತನಾಡಿದ ಅವರು ಈಗ ನಿಷ್ಪಕ್ಷಪಾತ ಸಮೀಕ್ಷೆಯನ್ನು ಆಧರಿಸಿ ಇಲ್ಲಿ ವಾಸಿಸುವ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡ ಲಾಗುವುದು ಎಂದರು.

ಬೇರೆ, ಬೇರೆ ಹಳ್ಳಿಗಳಿಂದ ಬಂದು ಇದೇ ಸ್ಮಶಾನ ಜಾಗದಲ್ಲಿ ಜೋಪಡ ಪಟ್ಟಿ ನಿರ್ಮಿಸಿ ನೆಲೆಸಿದ್ದಾರೆ. ನಿವೇಶನ ಅತಿಕ್ರಮಣ ಮಾಡಿಕೊಂಡವರಲ್ಲಿ ಉಳ್ಳವರು, ಇಲ್ಲದವರೂ ಇದ್ದಾರೆ. ಹೀಗಾಗಿ ಸಂಗ್ರಹಿಸಿರುವ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವುದಾಗಿ ತಿಳಿಸಿದರು.

400ಕ್ಕೂ ಅಧಿಕ ಜನ ವಾಸ ವಾಗಿರುವ ಸ್ಮಶಾನ ಜಾಗವನ್ನು ತೆರುವುಗೊಳಿಸಿದರೆ ಅರ್ಹ ಫಲಾನು ಭವಿಗಳಿಗೆ ಬೇರೆಡೆ ಆಶ್ರಯ ಯೋಜನೆ ಯಡಿ ನಿವೇಶನ ನೀಡುವ ವ್ಯವಸ್ಥೆ ಕಲ್ಪಿಸಿ ಕೊಡಲಾಗುವುದು ಎಂದು ಗಂಗೂಬಾಯಿ ಮಾನಕರ ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ಎನ್. ಆರ್. ಮಠ,ಸದಸ್ಯ ಹಣಮಂತ ಸುಣ ಗಾರ, ಚಂದ್ರಶೇಖರ ಅಮಲಿಹಾಳ, ಅರುಣ ವಿಧಾತೆ, ದಲಿತ ಬಹುಜನ ಚಳುವಳಿ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಗುಬ್ಬೇವಾಡ, ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ನಗರ ಘಟಕ ಅಧ್ಯಕ್ಷ ಸಾಹೇ ಬಣ್ಣ ಪುರದಾಳ ಉಪಸ್ಥಿತರಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.