ADVERTISEMENT

‘ಅಂತರಾಳದ ಭಾವವೇ ಕವಿತೆಯಾಗಲಿ’

​ಪ್ರಜಾವಾಣಿ ವಾರ್ತೆ
Published 21 ಮೇ 2014, 9:26 IST
Last Updated 21 ಮೇ 2014, 9:26 IST
ವಿಜಾಪುರ ನಗರದ ಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿ ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆಯು ಪುರಾತತ್ವ ವಸ್ತು ಸಂಗ್ರಹಾಲಯದ 101ನೇ ವರ್ಷಾಚರಣೆ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಕವಿಗೋಷ್ಠಿ ಕಾರ್ಯಕ್ರಮವನ್ನು ಸಾಹಿತಿ ಸಂಗಮೇಶ ಬದಾಮಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಬಂಡೆಪ್ಪ ತೇಲಿ, ಎಸ್‌.ಎಸ್‌. ಕನಮಡಿ, ಶಂಕರ ಕಟಗಿ, ಪ್ರಭಾವತಿ ದೇಸಾಯಿ, ವಿದ್ಯಾವತಿ ಅಂಕಲಗಿ, ಯು.ಎನ್‌. ಕುಂಟೋಜಿ ಇನ್ನಿತರರು ಚಿತ್ರದಲ್ಲಿದ್ದಾರೆ.
ವಿಜಾಪುರ ನಗರದ ಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿ ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆಯು ಪುರಾತತ್ವ ವಸ್ತು ಸಂಗ್ರಹಾಲಯದ 101ನೇ ವರ್ಷಾಚರಣೆ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಕವಿಗೋಷ್ಠಿ ಕಾರ್ಯಕ್ರಮವನ್ನು ಸಾಹಿತಿ ಸಂಗಮೇಶ ಬದಾಮಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಬಂಡೆಪ್ಪ ತೇಲಿ, ಎಸ್‌.ಎಸ್‌. ಕನಮಡಿ, ಶಂಕರ ಕಟಗಿ, ಪ್ರಭಾವತಿ ದೇಸಾಯಿ, ವಿದ್ಯಾವತಿ ಅಂಕಲಗಿ, ಯು.ಎನ್‌. ಕುಂಟೋಜಿ ಇನ್ನಿತರರು ಚಿತ್ರದಲ್ಲಿದ್ದಾರೆ.   

ವಿಜಾಪುರ: ಮುತ್ತಿನಂತಹ ಮಾತು­ಗಾರಿಕೆ ಹಿತಮಿತವಾಗಿರುತ್ತದೆ, ಬದುಕಿನ ಅಂತರಾಳದ ಭಾವವೇ ಕವಿತೆಯಾ­ಗಿರಬೇಕು. ಕಾವ್ಯದ ಬರವಣಿಗೆಯಲ್ಲಿ ಕಾವ್ಯ, ಭಾವ ಹಾಗೂ ಆಸೆ ತುಂಬಿರ­ಬೇಕು. ಕಾವ್ಯದ ಕಲ್ಪನೆಗೆ ವಿನ್ಯಾಸ ಇರಬೇಕು. ಕಾವ್ಯ ಶಬ್ದಮಣಿದರ್ಪಣ ಇದ್ದ ಹಾಗೆ ಎಂದು ಹಿರಿಯ ಸಾಹಿತಿ ಸಂಗಮೇಶ ಬದಾಮಿ ಹೇಳಿದರು.

ನಗರದ ಕಂದಗಲ್‌ ಹನುಮಂತ­ರಾಯ ರಂಗಮಂದಿರದಲ್ಲಿ ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆಯ ವತಿಯಿಂದ ಪುರಾತತ್ವ ವಸ್ತು ಸಂಗ್ರಹಾಲಯದ 101ನೇ ವರ್ಷಾಚರಣೆ ನಿಮಿತ್ತ ಮಂಗ­ಳ­ವಾರ ಹಮ್ಮಿಕೊಂಡ  ಕವಿಗೋಷ್ಠಿ ಕಾರ್ಯಕ್ರಮ ಸಸಿಗೆ ನೀರುಣಿಸಿ, ಉದ್ಘಾಟಿಸಿ  ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪ್ರೊ. ಯು.ಎನ್‌. ಕುಂಟೋಜಿ ಮಾತನಾಡಿ, ಕವಿತೆ ಪ್ರಾಸಬದ್ಧ­ವಾಗಿರಬೇಕು. ಇತ್ತೀಚಿನ ಕವಿತೆಗಳಲ್ಲಿ ಸ್ವಾರಸ್ಯವೇ ಕಾಣುತ್ತಿಲ್ಲ. ಇಂಥಹ ಕಾವ್ಯ ಬಹುದಿನ ಉಳಿಯುವುದಿಲ್ಲ, ಆದರೆ ಖಡ್ಗಕ್ಕಿಂತಲೂ ಹರಿತವಾದ ಶಕ್ತಿ ಕಾವ್ಯಕ್ಕೆ ಇದೆ ಎಂದು ಹೇಳಿದರು.

ನಗರದಲ್ಲಿ ಪಿಸುಗುಟ್ಟುವ ಗೋಲಗುಮ್ಮಟ ಜಗತ್‌ ಪ್ರಸಿದ್ಧ­ವಾದುದು. ಇಬ್ರಾಹಿಂರೋಜಾ ದಕ್ಷಿಣ ಭಾರತದ ತಾಜ್‌ಮಹಲ್ ಇದ್ದಹಾಗೆ. ಇಂತಹ ಇಲ್ಲಿನ ಹತ್ತು ಹಲವು ಐತಿ­ಹಾಸಿಕ ಸ್ಮಾರಕಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ನೀಡಬೇಕು ಎಂದರು.

ನಂತರ ನಡೆದ ಕವಿಗೋಷ್ಠಿಯಲ್ಲಿ ಶಿವತನಯ ಸುಧಾಕರ, ಡಾ. ಆನಂದ ಕುಲ­ಕರ್ಣಿ, ಬಾಬುರಾವ ಕುಲಕರ್ಣಿ, ಎಂ.ಎಫ್‌. ದಖನಿ, ರಾಮಚಂದ್ರ ದೀಕ್ಷಿತ, ಶಿವಕುಮಾರ ಶಿವಶಿಂಪಿ, ರಾಮಚಂದ್ರ ದೀಕ್ಷಿತ, ವಸಂತರಾವ ಕೊರ್ತಿ, ಸೋಮಶೇಖರ ಕುರ್ಲೆ, ಮುರು­ಗೇಶ ಸಂಗಮ, ಶಿವಾನಂದ ಹಿರೇಮಠ, ಕಲ್ಲು ಶಿವಶರಣರ, ಶರಣ­ಬಸವರಾಜ ಇಂಡಿ, ಕರಿಯಪ್ಪ ಕರಿಗಾರ ಮತ್ತಿತರರು ಕವನ ವಾಚಿಸಿದರು.

ಈ ಪೈಕಿ ಸೋಮಶೇಖರ ಕುರ್ಲೆ ಪ್ರಥಮ ಬಹುಮಾನ ಪಡೆದರೆ, ಶಿವಾ­ನಂದ ಹಿರೇಮಠ ದ್ವಿತೀಯ, ಶಿವಕು­ಮಾರ ಶಿವಶಿಂಪಿ ತೃತೀಯ ಬಹುಮಾನ ಪಡೆದರು. ಕವಿಗೋಷ್ಠಿಯಲ್ಲಿ ನಿರ್ಣಾಯಕರಾಗಿ ಪ್ರೊ. ಎಸ್‌.ಎಸ್‌. ಕನಮಡಿ, ಶಂಕರ ಕಟಗಿ, ಪ್ರಭಾವತಿ ದೇಶಪಾಂಡೆ ಭಾಗವಹಿಸಿದ್ದರು.

ಕವಯತ್ರಿ ವಿದ್ಯಾವತಿ ಅಂಕಲಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ ವಾಲಿ ಸ್ವಾಗತಿಸಿದರು. ವೀರೇಶ ವಾಲಿ ನಾಡಗೀತೆ ಹಾಡಿದರು.

ಅಶೋಕ ಇನಾಮದಾರ ಪ್ರಾರ್ಥಿಸಿದರು. ರಮೇಶ ಕೋಟಿಹಾಳ ಕಾರ್ಯಕ್ರಮ ನಿರೂಪಿಸಿ­ದರು. ಕೆ. ಸುನಂದಾ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.