ADVERTISEMENT

‘ಬಹುಶಿಸ್ತೀಯ ಸಂಶೋಧನಾ ಕೇಂದ್ರ’

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 7:09 IST
Last Updated 11 ಸೆಪ್ಟೆಂಬರ್ 2013, 7:09 IST

ವಿಜಾಪುರ: ಇಲ್ಲಿಯ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದಲ್ಲಿ ಬೆಂಗ ಳೂರಿನ ನ್ಯಾಷನಲ್ ಲಾ ಇಂಡಿಯಾ ಯುನಿವರ್ಸಿಟಿ ಸಹಯೋಗದಲ್ಲಿ ಬಹುಶಿಸ್ತೀಯ ಸಂಶೋಧನಾ ಕೇಂದ್ರ (ಸೆಂಟರ್ ಫಾರ್ ಮಲ್ಟೀ ಡಿಸಿಪ್ಲಿನರಿ ರಿಸರ್ಚ್‌)ಅನ್ನು ಪ್ರಸಕ್ತ ಸಾಲಿನಲ್ಲಿ ಪ್ರಾರಂಭಿಸಲಾಗುವುದು ಎಂದು ಕುಲಪತಿ ಪ್ರೊ.ಮೀನಾ ಆರ್‌. ಚಂದಾವರಕರ ತಿಳಿಸಿದರು.

ಆಹಾರ ಭದ್ರತೆ ಮತ್ತು ಮಕ್ಕಳ ಹಕ್ಕುಗಳು, ಮಹಿಳಾ ಸಬಲೀಕರಣ ಸೇರಿದಂತೆ ವಿವಿಧ ವಿಷಯಗಳ ಸಂಶೋಧನೆ ಅಲ್ಲದೆ ಇನ್ನೂ ಮುಂದೆ ವಿವಿಯಲ್ಲಿನ ಸಂಶೋಧನಾ ಪ್ರಾಜೆಕ್ಟ್‌ಗಳನ್ನು ಈ ಕೇಂದ್ರದ ಮೂಲಕ ರಾಷ್ಟ್ರೀಯ ಮಟ್ಟದ ಸಂಶೋಧನಾ ಕೇಂದ್ರಗಳಿಗೆ ಕಳಿಸಲು, ಸಂಶೋಧನಾ ಅನುದಾನ ಪಡೆದು­ಕೊಳ್ಳಲು ಅನುಕೂಲವಾಗ­ಲಿದೆ ಎಂದು ಮಂಗಳವಾರ ಇಲ್ಲಿ ಪತ್ರಿಕಾ­ಗೋಷ್ಠಿಯಲ್ಲಿ ತಿಳಿಸಿದರು.

ಈ ಕೇಂದ್ರದಲ್ಲಿ ಸಂಶೋಧನಾ ಕಾರ್ಯಕ್ಕೆ ಅನುಕೂಲವಾಗಲು ಆಯಾ ವಿಷಯಗಳಲ್ಲಿ ತಜ್ಞರ ಸೇವೆ ಪಡೆದುಕೊಳ್ಳಲಾಗುವುದು ಎಂದರು.

ಶಿವಮೊಗ್ಗ ಜಿಲ್ಲೆಯ ಅಕ್ಕಮಹಾ­ದೇವಿ ಜನ್ಮಸ್ಥಳ ಉಡತಡಿಯಲ್ಲಿ ಅಕ್ಕ­ಮಹಾದೇವಿ ಅಧ್ಯಯನ ಕೇಂದ್ರದ ಹತ್ತು ಎಕರೆ ಪ್ರದೇಶದಲ್ಲಿ ಮಹಿಳಾ ವಿವಿ ಸಂಶೋಧನಾ ಹಾಗೂ ಕೌಶಲ ಅಭಿವೃದ್ಧಿ ಕೇಂದ್ರ ಪ್ರಾರಂಭಿಸಲಾ­ಗುವುದು ಎಂದು ಹೇಳಿದರು.

ರಾಜ್ಯ ಸರ್ಕಾರ ಈ ವರ್ಷ ಆರಂಭಿ ಸಲಿರುವ 15 ನೂತನ ಸರ್ಕಾರಿ ಮಹಿಳಾ ಕಾಲೇಜುಗಳು ಮಹಿಳಾ ವಿವಿಯ ಸಂಲಗ್ನತೆ ಹೊಂದಲಿವೆ. ಆ ಮೂಲಕ ಮಹಿಳಾ ವಿವಿಯ ಕಾಲೇಜು ಗಳ ಸಂಖ್ಯೆ 109ಕ್ಕೆ ಹೆಚ್ಚಲಿದೆ. ಮಹಿಳಾ ವಿವಿ ವ್ಯಾಪ್ತಿಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲು ಮಂಡ್ಯದಲ್ಲಿ ಮಹಿಳಾ ವಿವಿ ಪ್ರಾದೇಶಿಕ ಕೇಂದ್ರ ಸ್ಥಾಪನೆಗೆ ರಾಜ್ಯ ಸರ್ಕಾರ ₨30 ಕೋಟಿ ಮಂಜೂರು ಮಾಡಿದೆ  ಎಂದು ಹೇಳಿದರು.

ಮಹಿಳಾ ವಿವಿಯಲ್ಲಿ ವಿಜ್ಞಾನದಲ್ಲಿ ಸಂಶೋಧನೆ ನಡೆಸಲು ಕ್ಯೂರಿ ( ಕನ್ಸೋಲಿಡೆಟ್‌ ಆಫ್ ಯುನಿವರ್ಸಿಟಿ ರಿಸರ್ಚ್‌ ಫಾರ್ ಇನೋವೆಟಿವ್ ಅಂಡ್ ಎಕ್ಸ್‌ಲೆನ್ಸ್) ಪ್ರಾಜೆಕ್ಟ್ ಅಡಿ ಯಲ್ಲಿ ₨3.30 ಮಂಜೂರಾಗಿದ್ದು, ಈಗಾಗಲೇ ₨1.34 ಕೋಟಿ ಬಿಡುಗಡೆ ಆಗಿದೆ. ಎರಡನಯ ಹಂತದ ಹಣ ಬಿಡುಗಡೆಗೆ ಐದು ಜನ ಸದಸ್ಯರ ಡಿ.ಎಸ್.ಟಿ ತಂಡ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದರು.

ಯುವಜನೋತ್ಸವ: ಮಹಿಳಾ ವಿವಿ ಪ್ರಸಕ್ತ ಸಾಲಿನ ಅಂತರ್ ಕಾಲೇಜು ಯುವಜನೋತ್ಸವ ಬಳ್ಳಾರಿಯ ಅಲ್ಲಂ ಸುಮಂಗಲಮ್ಮ ಮಹಿಳಾ ಪದವಿ ಕಾಲೇಜಿನಲ್ಲಿ ಇದೇ 27ರಿಂದ 29ರ ವರೆಗೆ ನಡೆಯಲಿದೆ ಎಂದರು.

ಜ್ಞಾನಶಕ್ತಿ ಕ್ಯಾಂಪಸ್‌ನಲ್ಲಿ ಕಟ್ಟಲಾಗಿರುವ ಇಂಗ್ಲಿಷ್ ವಿಭಾಗದ ನೂತನ ಕಟ್ಟಡ ವನ್ನು ಜೈವಿಕ ಮತ್ತು ಮಾಹಿತಿ ತಂತ್ರ ಜ್ಞಾನ ಖಾತೆ ಸಚಿವ ಎಸ್.ಆರ್. ಪಾಟೀಲ ಇದೇ 17ರಂದು ಉದ್ಘಾಟಿ ಸುವರು. ಮಹಿಳಾ ವಿವಿ ಪ್ರಸಾರಾಂಗದಿಂದ ಪ್ರಕಟವಾಗಿರುವ ಎಂಟು ಪುಸ್ತಕಗಳ ಬಿಡುಗಡೆ ಸಮಾರಂಭ ಇದೇ 18ರಂದು ಜರುಗಲಿದೆ. ಮಹಿಳಾ ವಿವಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜಾತಿ ಕೋಶದ ಅಡಿಯಲ್ಲಿ ಐ.ಎ.ಎಸ್    ಮತ್ತು ಐ.ಪಿ.ಎಸ್. ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಅಕಾಡಮಿ ಪ್ರಾರಂಭಿಸಲಾಗುತ್ತದೆ ಎಂದರು.

ವಿಶ್ವವಿದ್ಯಾಲಯ ನ್ಯಾಕ್ ಮಾನ್ಯತೆ ಪಡೆಯಲು ಸಜ್ಜಾಗಿದ್ದು ಎಸ್. ಆರ್.ಎಸ್. (ಸೆಲ್ಪ ಸ್ಟಡಿ ರಿಪೋರ್ಟ್‌) ತಯಾರಿಸಲಾಗಿದೆ. ಶೀಘ್ರ ನ್ಯಾಕ್ ಮಾನ್ಯತೆ ಪಡೆದುಕೊಳ್ಳಲಾಗುವುದು ಎಂದರು.

ಪ್ರಸಕ್ತ ಸಾಲಿಗೆ 30 ಸ್ನಾತಕೋತ್ತರ ಕೋರ್ಸ್‌ ಗಳಿಗೆ 916 ವಿದ್ಯಾರ್ಥಿನಿ ಯರು ಪ್ರವೇಶ ಪಡೆದಿದ್ದಾರೆ ಎಂದರು.
ಮಾಧ್ಯಮ ಸಂಯೋಜಕ ಡಾ. ಜೆ.ಎಂ. ಚಂದುನವರ ಪತ್ರಿಕಾಗೋಷ್ಠಿ ಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.