ADVERTISEMENT

‘ಮೌಲ್ಯಗಳ ಅಧಃಪತನದಿಂದ ಅಶಾಂತಿ’

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 5:57 IST
Last Updated 13 ಮಾರ್ಚ್ 2014, 5:57 IST

ತಾಳಿಕೋಟೆ: ಜನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳೇ ಜೀವಾಳ.  ಇಂದಿನ ಅವ್ಯವಸ್ಥೆ, ಅಸಮಾನತೆ, ಅಶಾಂತಿಗೆ,  ಅನಿಶ್ಚಿತ ಬದುಕಿಗೆ ಸಮಕಾಲೀನ ಸಮಾ ಜದಲ್ಲಿ ಮೌಲ್ಯಗಳ ಅಧ:ಪತನಗಳೇ  ಕಾರಣವಾಗಿವೆ ಎಂದು ಕತೆಗಾರ ವೀರಭದ್ರ ಕೌದಿ ಅಭಿಪ್ರಾಯಪಟ್ಟರು.

ಅವರು ಸಮೀಪದ ಕೊಣ್ಣೂರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬುಧ ವಾರ  ಕನ್ನಡ ಸಾಹಿತ್ಯ ಪರಿಷತ್ತು  ತಾಳಿ ಕೋಟೆ ವಲಯ ಘಟಕದ ವತಿಯಿಂದ  ದಿ.ರಾಮಸಿಂಗ್ ಹಜೇರಿ ಹಾಗೂ ದಿ. ಮುಕುಂದರಾವ ಹಂಚಾಟೆ ಸ್ಮರಣಾ ರ್ಥವಾಗಿ ಆಯೋಜಿಸಿದ್ದ ದತ್ತಿ ಉಪ ನ್ಯಾಸ ಕಾರ್ಯಕ್ರಮದಲ್ಲಿ ’ಜಾನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು’ ಕುರಿತು ಮಾತನಾಡಿದರು. 

ಜನಪದರು ತಮಗೆ ನೆರವಾಗುವ ಎಲ್ಲ ವಸ್ತುಗಳಲ್ಲಿ ದೇವರನ್ನು ಕಂಡರು. ಎಲ್ಲ ಜೀವಿಗಳಿಗೆ ಅನ್ನ ನೀಡುವ ಭೂ ತಾಯಿಯಲ್ಲಿ ಅವರ ಮೊದಲ ನಿಷ್ಠೆ. ಕಾಯಕ ತತ್ವದಲ್ಲಿ ಅವರದು ಅಚಲ ನಂಬಿಕೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಕಸಾಪ ವಲಯಾಧ್ಯಕ್ಷೆ ಶಾಂತಾಬಾಯಿ ನೂಲಿಕರ  ಕನ್ನಡ ನಾಡು–ನುಡಿ ಉಳಿದರೆ ಕನ್ನಡಿಗರು ಉಳಿಯುತ್ತೇವೆ. ಆದ್ದರಿಂದ ಪ್ರಾಥಮಿಕ ಹಂತದಿಂದಲೆ ಕನ್ನಡಾಭಿಮಾನ ಬೆಳೆಸುವ ಕೆಲಸ ನಡೆಯಬೇಕು ಎಂದರು. ಶರಣಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಅತಿಥಿ ಗಳಾಗಿ ಎಸ್.ಕೆ.ಪಿಯು ಕಾಲೇಜಿನ ಅಧ್ಯಕ್ಷ ಶಂಕ್ರಗೌಡ ಹಿಪ್ಪರಗಿ, ಗ್ರಾ.ಪಂ. ಸದಸ್ಯ ಆರ್‌.ಸಿ.ಪಾಟೀಲ, ಅಶೋಕ ಹೊಸಗೌಡರ, ಎಸ್‌.ಎಸ್‌.ಗಡೇದ, ಮುಖ್ಯಶಿಕ್ಷಕಿ ಎಲ್‌.ಬಿ.ಪಾಟೀಲ, ಎಸ್‌ಡಿಎಂಸಿ ಸದಸ್ಯ ಬಸವರಾಜ ನಾಯ್ಕೋಡಿ ಇದ್ದರು.

ಕಲಾವಿದ ಬಸವರಾಜ ದೊಡಮನಿ ಆರು ನಿಮಿಷದಲ್ಲಿ ದಾರ ಬಳಸಿ ಬಿಡಿ ಸಿದ ಚಿತ್ರ ಗಮನ ಸೆಳೆಯಿತು. ತಾಳಿ ಕೋಟೆ ಕೆಜಿಎಸ್‌ ಮುಖ್ಯ ಶಿಕ್ಷಕಿ ಎ.ಬಿ. ಪಾಟೀಲ ಸ್ವರಚಿತ ಕವನ ವಾಚಿಸಿದರು.

ದಿವಂಗತ ನಾಗಪ್ಪ ಹಿಪ್ಪರಗಿ ಇವರ ಸ್ಮರಣಾರ್ಥ ಪ್ರತಿ ವರ್ಷ ದತ್ತಿ ಉಪ ನ್ಯಾಸ ಕೊಡಿಸುವುದಾಗಿ ಎಸ್.ಕೆ.ಪಿಯು ಕಾಲೇಜಿನ ಅಧ್ಯಕ್ಷ ಶಂಕ್ರಗೌಡ ಹಿಪ್ಪರಗಿ ವಾಗ್ದಾನ ಮಾಡಿದರು. ಎಂ.ಬಿ.ಮಡಿ ವಾಳರ, ಎ.ವೈ.ನಾಯ್ಕೋಡಿ, ಆರ್‌.ಎ. ಮೆರೇಖೊರ, ಜೆಡ್‌ಎಸ್‌.ಅಸ್ಕಿ, ಪರಶುರಾಮ ಗಣಿ  ಮುಖ್ಯ ಶಿಕ್ಷಕ ಎಲ್‌.ಎಸ್‌.ಗಸ್ತಿ, ಪಿ.ಬಿ.ದೊಡಮನಿ ಮೊದಲಾದವರು ಇದ್ದರು.

ಕಾರ್ಯದರ್ಶಿ ದೇವರಾಜ ಬಾಗೇ ವಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಅಶೋಕ ಹೊಸಗೌಡರ ಸ್ವಾಗತಿ ಸಿದರು. ಎಸ್‌.ಎನ್‌.ಪಾಟೀಲ ನಿರೂ ಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.