ADVERTISEMENT

‘ವಚನ ಎಲ್ಲ ಕಾಲಕ್ಕೂ ಪ್ರಸ್ತುತ’

ಧಾರವಾಡದಲ್ಲಿ ಶರಣ ಸಾಹಿತ್ಯ ಸಮ್ಮೇಳನ: ಬೆಲ್ಲದ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 6:04 IST
Last Updated 12 ಡಿಸೆಂಬರ್ 2013, 6:04 IST

ಬಸವನಬಾಗೇವಾಡಿ: ಇಂದಿನ ಸಮಾ ಜಕ್ಕೆ 12ನೇ ಶತಮಾನದ ಶರಣರ ತತ್ವ ಸಂದೇಶ ಹೆಚ್ಚು ಅಗತ್ಯವಿದೆ. ಈ ನಿಟ್ಟಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಸಮಾಜದಲ್ಲಿರುವ ಎಲ್ಲರನ್ನು ಒಂದುಗೂಡಿಸುವುದ ಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗುತ್ತಿದೆ. ಇಂತಹ ಕಾರ್ಯ ಗಳಿಗೆ ಸಮಾಜದ ಜನರ ಸಹಕಾರ ಅಗತ್ಯವಾಗಿದೆ ಎಂದು ಮಾಜಿ ಶಾಸಕ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯಾಧ್ಯಕ್ಷ ಚಂದ್ರಕಾಂತ ಬೆಲ್ಲದ ಹೇಳಿದರು.

ಪಟ್ಟಣದ ಬಸವೇಶ್ವರ ದೇವಸ್ಥಾನ ದಲ್ಲಿ ಬುಧವಾರ ಶರಣ ಸಾಹಿತ್ಯ ಪರಿ ಷತ್‌ ತಾಲ್ಲೂಕು ಘಟಕ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. 12ನೇ ಶತಮಾನದಲ್ಲಿ ಬಸವೇಶ್ವರ ನೇತೖತ್ವದಲ್ಲಿ ನಡೆದ ಶರಣರ ಚಳ ವಳಿಯ ಫಲವಾಗಿ ಲಭಿಸಿದ ಅಮೂಲ್ಯ ಸಂಪತ್ತು ವಚನ ಸಾಹಿತ್ಯವಾಗಿದೆ.

ವಚನಗಳು ನಮ್ಮ ಬದುಕಿನ ದಾರಿ ದೀಪವಾಗಿವೆ. ಶರಣರ ಚಿಂತನೆ, ಅನುಭಾವ, ಸಂಶೋಧನಾ ಪ್ರಬಂಧಗಳ ಮಂಡನೆ ಸೇರಿದಂತೆ ಸಾಹಿತ್ಯಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳ ಸಂಗಮ ವಾಗಿ ಪರಿಷತ್‌ ಶರಣ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳುತ್ತಾ ಬಂದಿದೆ ಎಂದರು.

11ನೇ ಶರಣ ಸಾಹಿತ್ಯ ಸಮ್ಮೇಳನ ವನ್ನು ಧಾರವಾಡ ದಲ್ಲಿ ಡಿ. 27 ರಿಂದ 29 ರವರೆಗೆ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ.  ಸಮ್ಮೇಳನದಲ್ಲಿ 10 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಬಸವ ಜನ್ಮಭೂಮಿ ಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಉಪಾಧ್ಯಕ್ಷ ಅಪ್ಪಾರಾವ ಅಕ್ಕೋಣಿ,  ಪ್ರೊ.ಎಂ.ಎಸ್. ಕೊಟ್ಲಿ ಮಾತನಾಡಿದರು. ಸಭೆಯಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಜಿ. ಯಾದವಾಡ, ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾ ದಾರ. ಎಸ್.ಎಸ್.ಝಳಕಿ,        ಎಸ್.ಬಿ.ಬಶೆಟ್ಟಿ, ಎಚ್.ಎಸ್. ಬಿರಾದಾರ, ಪಂಡಿತರಾವ ಪಾಟೀಲ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ನಿಂಗಪ್ಪ ಬೊಮ್ಮನಹಳ್ಳಿ, ಶಂಕ್ರೆಪ್ಪ ಹಾರಿವಾಳ, ಎಫ್‌.ಡಿ. ಮೇಟಿ, ಅರವಿಂದ ಕುಲ ಕರ್ಣಿ, ಲಲಿತಕುಮಾರ ಹಗರಗುಂಡ, ಶ್ರೀಕಾಂತ ಕೊಟ್ರಶೆಟ್ಟಿ, ಬಾಲಪ್ಪ ವಾಡೇದ, ಬಸವರಾಜ ನಂದಿಹಾಳ ಇತರರು ಇದ್ದರು. ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ  ಡಾ.ಸಿ. ಎಂ.ಮೇಟಿ ಸ್ವಾಗತಿಸಿದರು. ಪ್ರೊ.ಪಿ. ಎಲ್. ಹಿರೇಮಠ ವಂದಿಸಿದರು.

ಹಜರತ್‌ ಪೀರ್‌ ಬಾವಡಿ ಉರುಸು 14ರಿಂದ
ವಿಜಾಪುರ:
ಇಲ್ಲಿಯ ಗೋಲ ಗುಮ್ಮಟ ಪೊಲೀಸ್‌ ಠಾಣೆ ಹತ್ತಿರದ ಹಜರತ್‌ ಪೀರ್‌ ಬಾವಡಿ ದರ್ಗಾದ ಉರುಸು ಅಂಗವಾಗಿ ಇದೇ 14 ಮತ್ತು 15ರಂದು ವಿವಿಧ ಕಾರ್ಯ ಕ್ರಮ ಜರುಗಲಿವೆ.

14 ರಂದು ಸಂಜೆ 7ಕ್ಕೆ ಸಂದಲ್ (ಗಂಧ) ಕಾರ್ಯಕ್ರಮ. 15 ರಂದು ಬೆಳಿಗ್ಗೆ 11ಕ್ಕೆ ಅನ್ನಸಂತರ್ಪಣೆ, ಸಂಜೆ 7ಕ್ಕೆ ಬಡ ಮಹಿಳೆಯರಿಗೆ ಬಟ್ಟೆ ವಿತರಣೆ, ರಾತ್ರಿ 9ಕ್ಕೆ  ನವದೆಹಲಿಯ ಪನ್ಕಾರ್‌ ಅಜೀಂನಾಜಾ ಅವರಿಂದ ಖವ್ವಾಲಿ ಕಾರ್ಯಕ್ರಮಗಳು ಜರುಗ ಲಿವೆ ಎಂದು ಸಲೀಂ ಅಲ್ಲಾವುದ್ದಿನ ಪೀರಜಾದೆ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.