ADVERTISEMENT

111 ಗ್ರಾಮದಲ್ಲಿ ನೀರಿನ ಸಮಸ್ಯೆ ಉಲ್ಬಣ?

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 5:36 IST
Last Updated 4 ಮಾರ್ಚ್ 2014, 5:36 IST

ವಿಜಾಪುರ: ಜಿಲ್ಲೆಯ ಅಂಗನವಾಡಿ ಕೇಂದ್ರಗಳ ನಿರ್ವಹಣೆಯಲ್ಲಿ ಆಗುತ್ತಿ ರುವ ಲೋಪಗಳ ಕುರಿತು ಸೋಮ ವಾರ ಇಲ್ಲಿ ನಡೆದ ಜಿಲ್ಲಾ ಪಂಚಾ ಯಿತಿ ಸಾಮಾನ್ಯ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆದು, ತಪ್ಪಿತಸ್ಥ ಶಿಶು ಅಭಿ ವೃದ್ಧಿ ಯೋಜನಾಧಿಕಾರಿಗಳು ಹಾಗೂ ಮೇಲ್ವಿಚಾರಕರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ನಿರ್ಧರಿ ಸಲಾಯಿತು.

‘ಅಂಗನವಾಡಿ ಮಕ್ಕಳಿಗೆ ಕೊಡ ಬೇಕಾದ ಹಾಲು, ಆಹಾರ ಧಾನ್ಯ ಮತ್ತಿತರ ಸಾಮಗ್ರಿಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ’ ಎಂದು ಸದಸ್ಯೆ ಅನುಸೂಯಾ ಜಾಧವ ಮಾಡಿದ ಆರೋಪಕ್ಕೆ ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ ಸೇರಿದಂತೆ ಬಹು ಪಾಲು ಸದಸ್ಯರು ಸಹಮತ ವ್ಯಕ್ತ ಪಡಿಸಿದರು.

‘ಅಂಗನವಾಡಿಗಳ ನಿರ್ವಹಣೆಗೆ ಸಂಬಂಧಿಸಿದಂತೆ ಇದೇ 6ರಂದು ಅಧಿಕಾರಿಗಳು, ಮೇಲ್ವಿಚಾರಕರ ಸಭೆ ಕರೆದು ಸೂಚನೆ ನೀಡಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ರೋಹಿಣಿ ಹಿರೇಮಠ ತಿಳಿಸಿದರು.
ಅಂಗನಾಡಿ ಕೇಂದ್ರಗಳ ಸಮರ್ಪಕ ನಿರ್ವಹಣೆ ಮಾಡದವರ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಸಿಇಒ ಶಿವಕುಮಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನೀರಿನ ಸಮಸ್ಯೆ: ಬಸವನ ಬಾಗೇ ವಾಡಿ ತಾಲ್ಲೂಕಿನ 18, ವಿಜಾಪುರದ 30, ಇಂಡಿಯ 30, ಮುದ್ದೇಬಿಹಾಳದ 11 ಹಾಗೂ ಸಿಂದಗಿಯ 21 ಸೇರಿದಂತೆ ಜಿಲ್ಲೆಯ 111 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಇದೆ. ಹೊಸ ಕೊಳವೆ ಬಾವಿ, ಟ್ಯಾಂಕರ್ ಮೂಲಕ ನೀರು ಪೂರೈಸುವ ವ್ಯವಸ್ಥೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಸದಸ್ಯ ಉಮೇಶ ಕೋಳಕೂರ ಪ್ರಶ್ನೆಗೆ ಮಾಹಿತಿ ನೀಡಿದರು.

ಜಟಾಪಟಿ: ಸಿಂದಗಿಯ ಸರ್ಕಾರಿ  ಶಾಲೆಗೆ ನಿಯೋಜನೆಗೊಂಡಿರುವ ಶಿಕ್ಷಕರೊಬ್ಬ ರನ್ನು ಮುಂದುವರಿಸುವ ಕುರಿತಂತೆ ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ ಹಾಗೂ ಸದಸ್ಯೆ ಅನುಸೂಯ ಜಾಧವ ಮಧ್ಯೆ ಜಟಾಪಟಿ ನಡೆದು, ಅನು ಸೂಯಾ ಜಾಧವ ಸಭೆಯಿಂದ ಹೊರ ನಡೆದರು. ಇತರ ಸದಸ್ಯರು ಅವರ ಮನವೊಲಿಸಿ ಕರೆ ತಂದರು.

ಮತ್ತೆ ಜಟಾಪಟಿ ಮುಂದುವರೆದಾಗ ಸಿಟ್ಟಿಗೆದ್ದ ಅಧ್ಯಕ್ಷೆ ಕಾವ್ಯಾ ದೇಸಾಯಿ ತಾವೇ ಸಭೆಯಿಂದ ಹೊರ ನಡೆಯುವ ಬೆದರಿಕೆ ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.