ADVERTISEMENT

ದಾವಣಗೆರೆಯಲ್ಲಿ ಮುಂದಿನ ವರ್ಷ ಪತ್ರಕರ್ತರ 38ನೇ ರಾಜ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 8:47 IST
Last Updated 4 ಫೆಬ್ರುವರಿ 2023, 8:47 IST
   

ವಿಜಯಪುರ: ಮುಂದಿನ ವರ್ಷ ದಾವಣಗೆರೆಯಲ್ಲಿ ಪತ್ರಕರ್ತರ 38ನೇ ರಾಜ್ಯ ಸಮ್ಮೇಳನ ನಡೆಸಲು ತೀರ್ಮಾನಿಸಲಾಯಿತು.
ನಗರದ ಕಂದಗಲ್ ಹನುಮಂತ ರಾಯ ರಂಗಮಂದಿರದಲ್ಲಿ ಶನಿವಾರ ಆರಂಭವಾದ ಪತ್ರಕರ್ತರ 37ನೇ ರಾಜ್ಯ ಸಮ್ಮೇಳನದ ಪ್ರತಿನಿಧಿಗಳ ಸಮಾವೇಶದಲ್ಲಿ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಘೋಷಿಸಿದರು.

ಮುಂದಿನ ಸಮ್ಮೇಳನ ನಡೆಸಲು ದಾವಣಗೆರೆ, ಚಿತ್ರದುರ್ಗ, ತುಮಕೂರು, ಉಡುಪಿ, ಕೋಲಾರ, ಕೊಪ್ಪಳದಿಂದ ಬೇಡಿಕೆ ಬಂದಿತ್ತು, ಕೊನೆಯಲ್ಲಿ ದಾವಣಗೆರೆಯಲ್ಲಿ ನಡೆಸಲು ಒಕ್ಕೊರಲಿನಿಂದ ನಿರ್ಧರಿಸಲಾಗಿದೆ ಎಂದು ಹೇಳಿದರು.

ಸಮಾವೇಶದಲ್ಲಿ ಕೈಗೊಂಡ ನಿರ್ಣಯಗಳು

ADVERTISEMENT

*ಪತ್ರಕರ್ತರನ್ನು ಯಶಸ್ವಿನಿ ಯೋಜನೆ ವ್ಯಾಪ್ತಿಗೆ ತರಬೇಕು
* ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಯೋಜನೆ ಜಾರಿಯಾಗಬೇಕು.
*ನಿವೃತ್ತ ಪತ್ರಕರ್ತರಿಗೆ ಪಿಂಚಣಿ ಯೋಜನೆಯಡಿ ನೀಡುವ ಗೌರವಧನವನ್ನು ₹ 20 ಸಾವಿರಕ್ಕೆ ಏರಿಕೆ ಮಾಡಬೇಕು.
*ಪತ್ರಕರ್ತರ ಚಿಕಿತ್ಸಾ ವೆಚ್ಚಕ್ಕೆ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ, ₹100 ಕೋಟಿ ಅನುದಾನ ನೀಡಬೇಕು
*ರಾಜ್ಯದ ಎಲ್ಲ ಪತ್ರಕರ್ತರ ಭವನ ನಿರ್ವಹಣೆಯನ್ನು ಕೆಯು ಡಬ್ಲ್ಯು ಜೆಗೆ ವಹಿಸಬೇಕು.

*ವಿಧಾನ ಪರಿಷತ್ ಗೆ ಸರ್ಕಾರ ನಾಮಕರಣ ಮಾಡುವಾಗ ಹಿರಿಯ ಪತ್ರಕರ್ತರಿಗೆ ಅವಕಾಶ ನೀಡಬೇಕು
* ₹10 ಸಾವಿರಕ್ಕಿಂತ ಕಡಿಮೆ ವೇತನ ಪಡೆಯುವ ಪತ್ರಕರ್ತರನ್ನು ಕಾರ್ಮಿಕ ಇಲಾಖೆ ವ್ಯಾಪ್ತಿಗೆ ಸೇರಿಸಿ, ನೆರವು, ಸೌಲಭ್ಯ ನೀಡಬೇಕು
*ನಗರ, ಪಟ್ಟಣಗಳಲ್ಲಿ ವಸತಿ, ನಿವೇಶನ ನೀಡವಲ್ಲಿ ಪತ್ರಕರ್ತರಿಗೆ ಶೇ 10ರಷ್ಟು ಕಾಯ್ದಿರಿಸಬೇಕು.
*ಸರ್ಕಾರ ಪ್ರತಿ ವರ್ಷ ಜಾಹೀರಾತು ದರ ಪರಿಷ್ಕರಣೆ ಮಾಡಿ, ದರ ಹೆಚ್ಚಳ ಮಾಡಬೇಕು.
*ಪತ್ರಕರ್ತ ಮೊಹರೆ ಹನುಮಂತ ರಾಯರ ಹೆಸರಲ್ಲಿ ರಾಜ್ಯದ ಯಾವುದಾದರೂ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಆರಂಭಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.