ADVERTISEMENT

ಶಾಲೆಗಳಲ್ಲಿ ಸಿ.ಸಿ. ಟಿ.ವಿ ಕ್ಯಾಮೆರಾ ಕಡ್ಡಾಯಗೊಳಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಜನವರಿ 2018, 6:23 IST
Last Updated 2 ಜನವರಿ 2018, 6:23 IST

ವಿಜಯಪುರ: ಜಿಲ್ಲೆಯ ಶಾಲಾ-ಕಾಲೇಜುಗಳಲ್ಲಿ, ಪ್ರವೇಶ ದ್ವಾರ ಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳ ವಡಿಸುವ ನಿಟ್ಟಿನಲ್ಲಿ ಸೂಚನೆ ನೀಡುವಂತೆ ಒತ್ತಾಯಿಸಿ ವಿವಿಧ ಸಂಘಗಳ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.

ಶಾಲಾ ಕಾಲೇಜುಗಳಲ್ಲಿ ಕುಡಿಯುವ ನೀರು, ಶೌಚಾಲಯ ಮತ್ತು ಯುನಿಫಾರ್ಮ್‌ ಕಡ್ಡಾಯಗೊಳಿಸಿದಂತೆ ರಾಜ್ಯದಲ್ಲಿ ಎಲ್ಲ ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ದ್ವಾರದ ಮೇಲೆ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸುವುದು ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಬೇಕು. 24 ಗಂಟೆ ನಿರಂತರವಾಗಿ ಕಾರ್ಯನಿರ್ವಹಿಸುವಂತೆ ಅಳವಡಿಸಿದ್ದಲ್ಲಿ, ಒಳ ಬರುವ ಮತ್ತು ಹೊರ ಹೋಗುವವರ ಫೋಟೋ ಸಹಿತ ವೇಳೆ ರಿಕಾಡರ್್ ಆಗಲಿದ್ದು, ಇದರಿಂದ ಅಹಿತಕರ ಘಟನೆ ಅತ್ಯಾಚಾರ, ಕೊಲೆಯಂತಹ ಘಟನೆಗಳು ನಡೆಯುವುದಿಲ್ಲ. ಹೊಸ ಶಾಲೆ ಪ್ರಾರಂಭವಾದಾಗ ಅಥವಾ ನವೀಕರಣ ಸಮಯದಲ್ಲಿ ಸಿ.ಸಿ. ಟಿ.ವಿ. ಅಳವಡಿಕೆಯನ್ನು ಖಾತ್ರಿಪಡಿಸಿಕೊಳ್ಳಬೇಕು.

ಶಾಲೆಯ ಗೇಟ್‌ನಲ್ಲಿ ದ್ವಾರಪಾಲಕನನ್ನು ನೇಮಿಸಿ ವಿದ್ಯಾರ್ಥಿ, ಶಾಲಾ ಸಿಬ್ಬಂದಿ ಮತ್ತು ಪಾಲಕರ ಹೊರತಾಗಿ ಯಾರಿಗೂ ಪ್ರವೇಶವನ್ನು ನಿಷೇಧಿಸಬೇಕು. ಮುಖ್ಯವಾಗಿ ವಿದ್ಯಾರ್ಥಿನಿಯರ ಶಾಲಾ ಕಾಲೇಜುಗಳ ಸುತ್ತ ಗುಂಪು ಗುಂಪಾಗಿ ಸೇರುವ ಹುಡುಗರನ್ನು ನಿಯಂತ್ರಿಸಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜವಳಿ ವ್ಯಾಪಾರ ಸಂಘ, ಸರಾಫ್ ವೃತ್ತದ ಸಂಘ, ವಿಜಯಪುರ ರೆಡ್ಮೆಡ್ ವ್ಯಾಪಾರಿಗಳ ಸಂಘ, ಬಾಂಡೆ ವ್ಯಾಪಾರಿಗಳ ಸಂಘ ಮತ್ತು ಮರ್ಚಂಟ್ಸ್ ಅಸೋಸಿಯೇಸನ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.