ADVERTISEMENT

ವಿಜಯಪುರ: ಕೋವಿಡ್‍ ಸೋಂಕಿತರ ಸಂಖ್ಯೆ 6.072ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2020, 14:17 IST
Last Updated 26 ಆಗಸ್ಟ್ 2020, 14:17 IST
ಕೊರೊನಾ ವೈರಸ್
ಕೊರೊನಾ ವೈರಸ್   

ವಿಜಯಪುರ: ಜಿಲ್ಲೆಯ ಕೋವಿಡ್‌ ಸೋಂಕಿತರ ಸಂಖ್ಯೆ 6.072ಕ್ಕೆ ಏರಿಕೆಯಾಗಿದೆ. ಬುಧವಾರ ಮತ್ತೆ ನಾಲ್ವರು ಸಾವಿಗೀಡಾಗಿದ್ದು, ಇದುವರೆಗೆ ಜಿಲ್ಲೆಯಲ್ಲಿ ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ 89ಕ್ಕೆ ಏರಿಕೆಯಾಗಿದೆ.

55, 72, 70 ಮತ್ತು 88 ವರ್ಷ ವಯಸ್ಸಿನ ವ್ಯಕ್ತಿಗಳು ಕೋವಿಡ್‌ ಸೋಂಕಿನಿಂದ ಬಳಲಿ ಬುಧವಾರ ಸಾವಿಗೀಡಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್‌ ತಿಳಿಸಿದ್ದಾರೆ.

ತಾಲ್ಲೂಕುವಾರು ವಿವರ: ವಿಜಯಪುರ ತಾಲ್ಲೂಕಿನಲ್ಲಿ 3,257 ಜನರಿಗೆ ಕೋವಿಡ್‌ ದೃಢವಾಗಿದೆ. ಬಸವನ ಬಾಗೇವಾಡಿ 562, ಬಬಲೇಶ್ವರ 65, ಚಡಚಣ 35, ದೇವರಹಿಪ್ಪರಗಿ 59, ಇಂಡಿ 528, ಕೊಲ್ಹಾರ 57, ಮುದ್ದೇಬಿಹಾಳ 589, ನಿಡಗುಂದಿ 35, ಸಿಂದಗಿ 489, ತಾಳಿಕೋಟೆ 198, ತಿಕೋಟಾ 76 ಮತ್ತು ಇತರೆ 122 ಜನರಿಗೆ ಕೋವಿಡ್‌ ಸೋಂಕು ತಗುಲಿರುವುದು ದೃಢವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.