ADVERTISEMENT

ಮುದ್ದೇಬಿಹಾಳ: ಬೈಕ್ ಅಪಘಾತ– ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 7:51 IST
Last Updated 15 ಜುಲೈ 2025, 7:51 IST
ಮುದ್ದೇಬಿಹಾಳ : ಪಟ್ಟಣದಿಂದ ಬಿದರಕುಂದಿ ಗ್ರಾಮದ ಕಡೆಗೆ ತೆರಳುತ್ತಿದ್ದ ಬೈಕ್‌ವೊಂದು ರಸ್ತೆ ಪಕ್ಕದ ಸಿಮೇಂಟ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿದ್ದು ಹಿಂಬದಿ ಸವಾರ ಗಾಯಗೊಂಡಿರುವ ಘಟನೆ ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಗುರಡ್ಡಿ ಪೆಟ್ರೋಲ್ ಪಂಪ್ ಎದುರಿಗೆ ಸೋಮವಾರ ನಡೆದಿದೆ.

ಮುದ್ದೇಬಿಹಾಳ : ಪಟ್ಟಣದಿಂದ ಬಿದರಕುಂದಿ ಗ್ರಾಮದ ಕಡೆಗೆ ತೆರಳುತ್ತಿದ್ದ ಬೈಕ್‌ವೊಂದು ಸೋಮವಾರ ರಸ್ತೆ ಪಕ್ಕದ ಸಿಮೇಂಟ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬರು ಮೃತಪಟ್ಟು, ಇನ್ನೊಬ್ಬರಿಗೆ ಗಾಯಗಳು ಆಗಿವೆ.

ಬಿದರಕುಂದಿ ಗ್ರಾಮದ ಆಕಾಶ ಮಲ್ಲಪ್ಪ ಕುರಿ (22) ಮೃತರು. ಅನ್ವರ್ ಜಾಲಗಾರ(20) ಗಾಯಗೊಂಡವರು. ಅವರನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಮುದ್ದೇಬಿಹಾಳ ಠಾಣೆ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT