ADVERTISEMENT

ಉದ್ಯೋಗ ಮೇಳ, ಜಾತ್ರೆಗೆ ಹೆಚ್ಚುವರಿ ಬಸ್‌ ಸಂಚಾರ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2025, 15:51 IST
Last Updated 11 ಏಪ್ರಿಲ್ 2025, 15:51 IST

ವಿಜಯಪುರ: ಕಲಬುರ್ಗಿಯ ಕೆ.ಸಿ.ಟಿ.ಕಾಲೇಜು ಕ್ಯಾಂಪಸ್‍ನಲ್ಲಿ ಏ.16ರಂದು ಜರುಗುವ ಕಲ್ಯಾಣ ಕರ್ನಾಟಕ ಉದ್ಯೋಗ ಮೇಳ ಹಾಗೂ ಏ.16ರಿಂದ 18ರವರೆಗೆ ಕೂಡಲ ಸಂಗಮದಲ್ಲಿ ಜರುಗು ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಿಂದ ಹೆಚ್ಚುವರಿ ಸಾರಿಗೆಗಳ ವ್ಯವಸ್ಥೆ ಮಾಡಲಾಗಿದೆ.

ಏ.15ರಂದು ನಡೆಯುವ ಉದ್ಯೋಗ ಮೇಳಕ್ಕೆ ವಿಜಯಪುರ ವಿಭಾಗದ ತಾಲ್ಲೂಕು ಮುಖ್ಯ ಬಸ್ ನಿಲ್ದಾಣಗಳಿಂದ ಕಲಬುರಗಿಗೆ ಹೆಚ್ಚುವರಿ ಸಾರಿಗೆಗಳ ಕಾರ್ಯಾಚರಣೆ ಹಾಗೂ ಕೂಡಲಸಂಗಮದಲ್ಲಿ ಏ.16ರಿಂದ 18ರವರೆಗೆ ಜರುಗುವ ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರು ಹಾಗೂ ಭಕ್ತಾದಿಗಳ ಅನುಕೂಲಕ್ಕಾಗಿ ವಿಜಯಪುರ, ಮುದ್ದೇಬಿಹಾಳ ತಾಳಿಕೋಟೆ ಹಾಗೂ ಬ.ಬಾಗೇವಾಡಿಯಿಂದ ಹೆಚ್ಚುವರಿ ಸಾರಿಗೆಗಳ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಪ್ರಯಾಣಿಕರು ಸಾರಿಗೆ ಸೌಲಭ್ಯಕ್ಕಾಗಿ ಹಾಗೂ ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಘಟಕ ವ್ಯವಸ್ಥಾಪಕರು ವಿಜಯಪುರ ಘಟಕ-1 ಮೊ: 7760992263, ಘಟಕ-2 ಮೊ: 7760992264, ಇಂಡಿ ಮೊ: 7760992265, ಸಿಂದಗಿ ಮೊ: 7760992266, ಮುದ್ದೇಬಿಹಾಳ ಮೊ: 7760992267, ತಾಳಿಕೋಟೆ ಮೊ: 7760992268, ಬ.ಬಾಗೇವಾಡಿ ಮೊ: 7760992269, ನಿಲ್ದಾಣಾಧಿಕಾರಿಗಳು ಕೇಂದ್ರ ಬಸ್ ನಿಲ್ದಾಣ ವಿಜಯಪುರ ಮೊ: 7760992258, ಕೇಂದ್ರ ಬಸ್ ನಿಲ್ದಾಣ ವಿಜಯಪುರ ಮೊ: 08352-251344 ಮತ್ತು ವಿಭಾಗೀಯ ಸಾರಿಗೆ ಅಧಿಕಾರಿ ಮೊ: 7760992252 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.