ADVERTISEMENT

ಕನ್ನಡ ನಾಡು ನುಡಿ ರಕ್ಷಣೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 13:18 IST
Last Updated 1 ನವೆಂಬರ್ 2021, 13:18 IST
ವಿಜಯಪುರ ನಗರದ ಕೆಎಚ್‍ಬಿ ಕಾಲೊನಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಾಗಠಾಣ ಶಾಸಕ ಡಾ. ದೇವಾನಂದ ಚವ್ಹಾಣ ಮಾತನಾಡಿದರು.
ವಿಜಯಪುರ ನಗರದ ಕೆಎಚ್‍ಬಿ ಕಾಲೊನಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಾಗಠಾಣ ಶಾಸಕ ಡಾ. ದೇವಾನಂದ ಚವ್ಹಾಣ ಮಾತನಾಡಿದರು.   

ವಿಜಯಪುರ: ಕನ್ನಡ ನಾಡು ನುಡಿ ರಕ್ಷಣೆಗಾಗಿ ಪ್ರತಿಯೊಬ್ಬರು ಪಣ ತೊಡಗಬೇಕು. ಕನ್ನಡವೇ ನಮ್ಮ ಉಸಿರು, ಕನ್ನಡವೇ ನಮ್ಮ ಪ್ರಾಣ ಎಂದು ತಿಳಿದು ಕನ್ನಡ ಪ್ರೀತಿಸಬೇಕು ಎಂದು ನಾಗಠಾಣ ಶಾಸಕ ಡಾ. ದೇವಾನಂದ ಚವ್ಹಾಣ ಹೇಳಿದರು.

ನಗರದ ಕೆಎಚ್‍ಬಿ ಕಾೊನಿಯಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 66 ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರುಮಾತನಾಡಿದರು.

ಇಡೀ ದೇಶದ ಭಾಷೆಗಳಲ್ಲಿ ಕನ್ನಡ ಅತ್ಯಂತ ಶ್ರೇಷ್ಠ ಭಾಷೆಯಾಗಿದೆ. ಪ್ರಾಚೀನ ಇತಿಹಾಸ ಹೊಂದಿರುವ ನಮ್ಮ ಕನ್ನಡ ಭಾಷೆ ಸುಲಿದ ಬಾಳೆ ಹಣ್ಣಿನಷ್ಟೇ ಸುಲಭವಾಗಿದೆ. ಕನ್ನಡಕ್ಕಾಗಿ ನಾವೆಲ್ಲ ಕೈ ಎತ್ತೋಣ ಕನ್ನಡ ತಾಯಿಯ ಸೇವೆ ಮಾಡಲು ಮುಂದಾಗೋಣ ಎಂದರು.

ADVERTISEMENT

ಕೇವಲ ಒಂದು ದಿನ ಮಾತ್ರ ಕನ್ನಡದ ಬಗ್ಗೆ ಕಾಳಜಿ ತೋರಿಸದೆ ಪ್ರತಿದಿನ ಕನ್ನಡತನ ಮೆರೆಯಲು ಮುಂದಾಗೋಣ, ಕನ್ನಡ ರಕ್ಷಿಸುವುದರ ಜೊತೆಗೆ ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ ಎನ್ನೊಣ ಎಂದರು.

ಕನ್ನಡ ಚಿತ್ರರಂಗದ ಮೇರು ನಟ ಪುನೀತ್‌ ರಾಜ್‌ಕುಮಾರ್‌ ನಿಧನಕ್ಕೆ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕನ್ನಡ ಸಂಘಟನೆಗಳ ಪ್ರಮುಖರಾದ ಬಿ.ಬಿ.ಲಮಾಣಿ, ಪಾಂಡು ರಾಠೋಡ, ಸಂದೀಪ, ವಿನೋದ, ಅಭಿನವ ದೇವಾನಂದ ಚವ್ಹಾಣ, ರವಿ ಚವ್ಹಾಣ, ಕರಿಬಸಪ್ಪ ಬೂದಿಹಾಳ, ಚಿದಾನಂದ ಗುಡ್ಡದ, ಎಸ್.ಪಿ.ಲೋಗಾವಿ, ಕಿರಣಕುಮಾರ್ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಯ ಪದಾಧಿಕಾರಿಗಳು ಕಾರ್ಯಕರ್ತರು, ಸಾರ್ವಜನಿಕರುಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.