ಆಲಮಟ್ಟಿ: ‘ಕರ್ನಾಟಕ ಗಾಂಧಿ ಹರ್ಡೇರಕ ಮಂಜಪ್ಪ, ಮುಳಗುಂದದ ಬಾಲಲೀಲಾ ಮಹಾಂತ ಶಿವಯೋಗಿ ಹಾಗೂ ಬಂಥನಾಳದ ಸಂಗನಬಸವ ಶ್ರೀಗಳ ಜನ್ಮಭೂಮಿ, ವಿದ್ಯಾಭೂಮಿಯಾಗಿರುವ ಇಲ್ಲಿಯ ಪುರವರ ಹಿರೇಮಠದ ಅನ್ನದಾನೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ಅದಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು’ ಎಂದು ಸಕ್ಕರೆ, ಜವಳಿ ಹಾಗೂ ಎಪಿಎಂಸಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ಇಲ್ಲಿಯ ಅನ್ನದಾನೇಶ್ವರ ಪುರವರ ಹಿರೇಮಠದ ಜಾತ್ರೆಯ ಅಂಗವಾಗಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿಡಗುಂದಿಯ ರುದ್ರಮುನಿ ಸ್ವಾಮೀಜಿ, ಗಿರಿಸಾಗರದ ರುದ್ರಮುನಿ ಸ್ವಾಮೀಜಿ, ಮುತ್ತತ್ತಿಯ ಗುರುಲಿಂಗ ಸ್ವಾಮೀಜಿ, ಕೊಣ್ಣೂರಿನ ವಿಶ್ವಪ್ರಭುದೇವ ಸ್ವಾಮೀಜಿ, ಚಿಮ್ಮಲಗಿಯ ಸಿದ್ದರೇಣುಕ ಸ್ವಾಮೀಜಿ, ಇಟಗಿಯ ಗುರುಶಾಂತವೀರ ಸ್ವಾಮೀಜಿ, ಕುಂದರಗಿಯ ವೀರಸಂಗಮೇಶ್ವರ ಸ್ವಾಮೀಜಿ, ನಂದವಾಡಗಿಯ ಅಭಿನವ ಚನ್ನಬಸವ ಸ್ವಾಮೀಜಿ, ಬೀಳಗಿಯ ಗುರುಪಾದ ಸ್ವಾಮೀಜಿ, ಚುಂಚನಹಳ್ಳಿಯ ಚನ್ನಬಸವ ಸ್ವಾಮೀಜಿ, ಹುನಗುಂದದ ಅಮರೇಶ್ವರ ದೇವರು ಸಾನ್ನಿಧ್ಯ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಚಾಣಕ್ಯ ಕರಿಯರ್ ಅಕಾಡೆಮಿಯ ಮುಖ್ಯಸ್ಥ ಎನ್.ಎಂ. ಬಿರಾದಾರ, ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕವಿತಾ ಬಡಿಗೇರ, ಶಿವಾನಂದ ಅವಟಿ, ನಿವೃತ್ತ ನ್ಯಾಯಾಧೀಶ ರಾಚಪ್ಪ ಚಿನಿವಾಲರ, ಅಶೋಕ ಚಿನಿವಾರ, ಸಿದ್ಧಲಿಂಗೇಶ ಚಿನಿವಾರ, ಸಿ.ಕೆ. ಹೊಸಮನಿ, ಬಸವರಾಜ ಬಾದರದಿನ್ನಿ ಇದ್ದರು.
ಸೋಮವಾರ ಬೆಳಿಗ್ಗೆ ಅನ್ನದಾನೇಶ್ವರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಜರುಗಿತು. ರಾಷ್ಟ್ರಧ್ವಜಾರೋಹಣವನ್ನು ಭರತರಾಜ ದೇಶಮುಖ ನೆರವೇರಿಸಿದರು. ಅನ್ನದಾನೇಶ್ವರ ಪುರುವರ ಹಿರೇಮಠದ ರುದ್ರಮುನಿ ಸ್ವಾಮೀಜಿ ನೇತೃತ್ವ ವಹಿಸಿದ್ದರು.
ಮಧ್ಯಾಹ್ನ ಪಲ್ಲಕ್ಕಿ ಉತ್ಸವ ಜರುಗಿತು. ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ಜರುಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.