ಆಲಮಟ್ಟಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಆಲಮಟ್ಟಿ ಜಲಾಶಯದ ಒಳಹರಿವು ಹೆಚ್ಚುತ್ತಲೇ ಇದೆ.
ಕಳೆದ ವಾರದ 40 ಸಾವಿರ ಕ್ಯುಸೆಕ್ ಆಸುಪಾಸು ಇದ್ದ ಒಳಹರಿವು ಗುರುವಾರ ಸಂಜೆ 1,56,222 ಕ್ಯುಸೆಕ್‌ಗೆ ಏರಿಕೆಯಾಗಿದೆ.
ಮುಂಜಾಗ್ರತೆ ಕ್ರಮವಾಗಿ ಒಳಹರಿವಿಗಿಂತ ಹೊರಹರಿವನ್ನು ಹೆಚ್ಚಿಸಲಾಗಿದ್ದು, ಬುಧವಾರದಿಂದ 1.75 ಲಕ್ಷ ಕ್ಯುಸೆಕ್ ಇದ್ದ ಹೊರಹರಿವು ಗುರುವಾರವೂ ಮುಂದುವರೆದಿದೆ.
ಹೊರಹರಿವು ಹೆಚ್ಚಿದ್ದರಿಂದ ಜಲಾಶಯದ ಮಟ್ಟವೂ ಕಡಿಮೆಯಾಗಿದ್ದು 519.28 ಮೀ. ಗೆ ಇಳಿದಿದೆ. ಜಲಾಶಯದ ಎಲ್ಲಾ 26 ಗೇಟ್‌ಗಳನ್ನು ತೆರೆದು ನೀರನ್ನು ನದಿ ಪಾತ್ರಕ್ಕೆ ಹರಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.