ಆಲಮಟ್ಟಿ ಜಲಾಶಯದ ಹಿನ್ನೀರಿನ ಚಂದ್ರಮ್ಮಾ ದೇವಸ್ಥಾನದ ಬಳಿ ಕೃಷ್ಣಾ ನದಿಯಲ್ಲಿ ಭಾನುವಾರ ರೈತ ಮುಖಂಡರು ಬಾಗಿನ ಅರ್ಪಿಸಿದರು
ಆಲಮಟ್ಟಿ: ಆಲಮಟ್ಟಿ ಜಲಾಶಯ ಭರ್ತಿಯಾದ ನಿಮಿತ್ತ ತಾಲ್ಲೂಕು ರೈತ ಹಿತರಕ್ಷಣಾ ಸಮಿತಿಯಿಂದ ಕೃಷ್ಣೆಗೆ ಗಂಗಾಪೂಜೆ ಹಾಗೂ ಬಾಗಿನ ಅರ್ಪಣೆ ಇಲ್ಲಿಯ ಚಂದ್ರಮ್ಮಾ ದೇವಸ್ಥಾನದ ಬಳಿ ಭಾನುವಾರ ಜರುಗಿತು.
1964ರಲ್ಲಿ ಅಡಿಗಲ್ಲು ನೆರವೇರಿದ ಆಲಮಟ್ಟಿ ಜಲಾಶಯ ನಿರ್ಮಾಣ ಪೂರ್ಣಗೊಂಡಿದ್ದು, 2002 ರಲ್ಲಿ, ಆದರೂ ವಿಜಯಪುರ ಜಿಲ್ಲೆ ಇನ್ನೂವರೆಗೂ ಸಂಪೂರ್ಣ ನೀರಾವರಿಯಾಗಿಲ್ಲ ಎಂದು ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ತಿಪ್ಪಣ್ಣ ಬಂಡಿವಡ್ಡರ ಹೇಳಿದರು.
ಆಲಮಟ್ಟಿ ಜಲಾಶಯದ ಹಿನ್ನೀರಿನ ಚಂದ್ರಮ್ಮಾ ದೇವಸ್ಥಾನದ ಬಳಿ ರೈತ ಮುಖಂಡರು ಕೃಷ್ಣೆಗೂ ಬಾಗಿನ ಅರ್ಪಿಸುವ ಮುನ್ನ ಭಾನುವಾರ ಗಂಗಾಪೂಜೆ ಸಲ್ಲಿಸಿದರು
ಜಲಾಶಯವನ್ನು ಹಗಲು ರಾತ್ರಿ ಕಾವಲು ಕಾಯುವ ಕೆಎಸ್ಐಎಸ್ಎಫ್ ಪೊಲೀಸ್ ಸಿಬ್ಬಂದಿ ಕಾರ್ಯ ಶ್ಲಾಘಿಸಲಾಯಿತು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಿಂಗರಾಜ ಆಲೂರ ಮಾತನಾಡಿ, ಆಲಮಟ್ಟಿ ಜಲಾಶಯ ಬಹುತೇಕ ಭರ್ತಿಯಾಗಿದ್ದು ಮುಖ್ಯಮಂತ್ರಿ ಶೀಘ್ರವೇ ಬಾಗಿನ ಅರ್ಪಿಸಬೇಕು ಎಂದರು.
ಕರ್ನಾಟಕ ರಾಜ್ಯ ರೈತ ಸಂಘ ಮೇಟಿ ಬಣದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಂಗಣ್ಣ ಬಾಗೇವಾಡಿ, ಕೆ.ಎಂ.ಗುಡ್ನಾಳ, ಸೀತಪ್ಪ ಗಣಿ, ವಿಠ್ಠಲ ಬಂಡಿವಡ್ಡರ, ಎಚ್.ಎಫ್. ಕಟ್ಟಿಮನಿ, ಗುರುರಾಜ ವಡ್ಡರ, ರಾಮಸ್ವಾಮಿ ಕಡೇಮನಿ, ಎಸ್.ಎಂ.ಪಾಟೀಲ, ಬಸನಗೌಡ ಪಾಟೀಲ, ಅಯ್ಯಪ್ಪ ಬಿದರಕುಂದಿ, ವಿರೇಶ ಮಡಿವಾಳರ, ಅಮರೇಶ ಉಪ್ಪಾರ, ರಮೇಶ ಹುಲ್ಲೂರ ಶಿವಪ್ಪ ಬೇವಿನಮಟ್ಟಿ, ವೆಂಕಟೇಶ ವಡ್ಡರ, ರಾಮಚಂದ್ರಪ್ಪ ವಡ್ಡರ, ಸಾಬಣ್ಣ ಅಂಗಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.