ಸಿಂದಗಿ: ಪಟ್ಟಣದ ಪಿಡಬ್ಲೂಡಿ ಕಾರ್ಯಾಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಿಚಾರವಾದ) ರಾಜ್ಯ ಸಂಘಟನಾ ಸಂಚಾಲಕ ರಾಕೇಶ ಕಾಂಬಳೆ ನೇತೃತ್ವದಲ್ಲಿ ಕಾರ್ಯಕರ್ತರು ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಕರೆಪ್ಪ ಬೆಳ್ಳಿ ಅವರಿಗೆ ಮನವಿ ಸಲ್ಲಿಸಿದರು.
ರಾಕೇಶ ಕಾಂಬಳೆ ಮಾತನಾಡಿ, ಸಂವಿಧಾನಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರವನ್ನು ಕಾರ್ಯಾಲಯದ ಕಪಾಟಿನ ಮೇಲೆ ಇಟ್ಟು ಅವಮಾನಗೊಳಿಸಿದ್ದಾರೆ. ಮಹಾತ್ಮರ ಭಾವಚಿತ್ರಗಳಿಗೆ ಅವಮಾನ ಮಾಡುವುದು ಸಹಿಸಲಾಗದ ಕಾರ್ಯವಾಗಿದೆ. ಹೀಗಾಗಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
‘ಕಾರ್ಯಾಲಯದಲ್ಲಿದ್ದ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರ ಹಳೆಯದಾಗಿದ್ದರಿಂದ ಅದನ್ನು ತೆಗೆದು ಹೊಸ ಭಾವಚಿತ್ರ ಹಾಕಲಾಗಿದೆ’ ಎಂದು ಪಿಡಬ್ಲೂಡಿ ಎಇಇ ಅರುಣಕುಮಾರ ಸ್ಪಷ್ಟನೆ ನೀಡಿದರು.
ಸಮಿತಿ ಜಿಲ್ಲಾ ಸಂಚಾಲಕ ಉಮೇಶ ದೊಡಮನಿ, ತಾಲ್ಲೂಕು ಸಂಚಾಲಕ ಶಿವಾನಂದ ಶರ್ಮಾ, ಜಿಲ್ಲಾ ಸಂಘಟನಾ ಸಂಚಾಲಕ ಮಾಂತೇಶ ಸೋಮಪುರ, ಶ್ರೀಧರ, ಮಹಿಳಾ ಒಕ್ಕೂಟ ಸಂಚಾಲಕಿ ಜಯಶ್ರೀ ನಾಟೀಕಾರ, ಅನೀಲ ಸುರಗಳ್ಳಿ, ಅಪ್ಪಾಸಾಹೇಬ ಭೈರಾಮಡಗಿ, ಪರುಶರಾಮ ಮೇಲಿನಮನಿ, ಬಸವರಾಜ ಕಟ್ಟಿಮನಿ, ಪ್ರವೀಣ ಚಲವಾದಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.