ADVERTISEMENT

ದೀಪಾವಳಿಗೆ 11 ಸಾವಿರ ಕುಟುಂಬಗಳಿಗೆ ತಲಾ ₹2 ಸಾವಿರ: ಯತ್ನಾಳ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2023, 16:14 IST
Last Updated 26 ಸೆಪ್ಟೆಂಬರ್ 2023, 16:14 IST
<div class="paragraphs"><p> ಬಸನಗೌಡ ಪಾಟೀಲ ಯತ್ನಾಳ </p></div>

ಬಸನಗೌಡ ಪಾಟೀಲ ಯತ್ನಾಳ

   

ವಿಜಯಪುರ: ‘ಎಲ್ಲರೂ ಚುನಾವಣೆ ವೇಳೆ ಹಣ ಹಂಚಿ, ಆಮಿಷ ಒಡ್ಡುವರು. ಆದರೆ, ನಾನು ದೀಪಾವಳಿ ಆಚರಿಸಲು ಕ್ಷೇತ್ರದ 11 ಸಾವಿರ ಕುಟುಂಬಗಳಿಗೆ ತಲಾ ₹2 ಸಾವಿರ ನೀಡಲು ನಿರ್ಧರಿಸಿದ್ದೇನೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.

ನಗರದಲ್ಲಿ ಸೋಮವಾರ ರಾತ್ರಿ ನಡೆದ ಸರ್ವ ಗಜಾನನ ಮಂಡಳಿಗಳಿಗೆ ಸನ್ಮಾನ ಸಮಾವೇಶದಲ್ಲಿ ಮಾತನಾಡಿದ ಅವರು, ‘ಸನಾತನ ಧರ್ಮ ಯಾರಿಂದಲೂ ನಾಶ ಪಡಿಸಲು ಆಗದು. ಸಾಕಷ್ಟು ಜನ ಬಂದು ಹೋದರೂ ಏನು ಮಾಡಲು ಆಗಿಲ್ಲ. ಉಳಿದ ಧರ್ಮಗಳಿಗೆ ಸಂಸ್ಥಾಪಕರು ಇದ್ದಾರೆ. ಆದರೆ, ನಮ್ಮ ಸನಾತನ ಹಿಂದೂ ಧರ್ಮ ದೇವರಿಂದ ಹುಟ್ಟಿಕೊಂಡಿದೆ. ಬ್ರಹ್ಮ, ವಿಷ್ಣು, ಮಹೇಶ್ವರರೇ ಸಂಸ್ಥಾಪಕರು. ನಮ್ಮ ಧರ್ಮ ಯಾರಿಗೂ ಅನ್ಯಾಯ ಮಾಡಿಲ್ಲ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.