ಆಲಮೇಲ: ಸಮೀಪದ ಕುರಬತಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಹಳ್ಳ ದಾಟುವಾಗ ಕೊಚ್ಚಿ ಹೋಗಿರುವರೈತ ಬಸವಂತಪ್ಪ ಅಂಬಾಗೋಳ ಪತ್ತೆ ಕಾರ್ಯಾಚರಣೆ ಶುಕ್ರವಾರ ದಿನಪೂರ್ತಿ ನಡೆಯಿತು.
ಗುರುವಾರ ಬೆಳಿಗ್ಗೆಯಿಂದ ಶುಕ್ರವಾರ ರಾತ್ರಿವರೆಗೂ ಅಗ್ನಿಶಾಮಕ ದಳದ ಸಿಬ್ಬಂದಿ, ಸ್ಥಳೀಯ ಈಜುಗಾರರು ಸತತವಾಗಿ ಶೋಧಾ ಕಾರ್ಯಾಚಾರಣೆ ಮಾಡುತ್ತಿದ್ದು, ಯಾವುದೇ ಸುಳಿವು ಲಭಿಸಲಿಲ್ಲ.
ಎರಡು ದಿನವಾದರೂ ರೈತನ ಸುಳಿವು ಸಿಗದೇ ಇರುವುದರಿಂದಕುಟುಂಬದವರು ಆತಂಕಕೊಳಗಾಗಿದ್ದಾರೆ.
ಸಿಂದಗಿ ತಹಶೀಲ್ದಾರ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳಉಸ್ತುವಾರಿಯಲ್ಲಿ ಪತ್ತೆ ಕಾರ್ಯಾಚರಣೆ ನಡೆದಿದೆ ಪೊಲೀಸ್ ಇನ್‌ಸ್ಪೆಕ್ಟರ್ ಸುರೇಶ ಗಡ್ಡಿ ಹೇಳಿದರು.
ತಾರಾಪುರ ಗ್ರಾಮದ ಭೀಮಾ ಹಿನ್ನೀರಿನಲ್ಲೂ ಶೋಧ ನಡೆದಿದ್ದು, ನುರಿತ ಮೀನುಗಾರರ ತಂಡವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಕಂದಾಯ ಅಧಿಕಾರಿ ಅತ್ತಾರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.