ಪ್ರಾತಿನಿಧಿಕ ಪತ್ರ
ವಿಜಯಪುರ: ಮಹಿಳೆಯರ ಸಬಲೀಕರಣ, ಹಕ್ಕುಗಳಿಗಾಗಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಉತ್ತೇಜನ ನೀಡಲು ಇಲ್ಲಿನ ಸಬಲಾ ಸಂಸ್ಥೆ ‘ಸಬಲಾ ಪುರಸ್ಕಾರ’ ನೀಡಲಿದ್ದು,2025ನೇ ಸಾಲಿಗೆ ಅರ್ಜಿ ಆಹ್ವಾನಿಸಿದೆ.
ಮಹಿಳಾ ಹೋರಾಟಗಾರು ಹಾಗೂ ಗ್ರಾಮೀಣ ಮಹಿಳಾ ಉದ್ಯಮಿಗೆ ನೀಡುವ ಪ್ರಶಸ್ತಿಯು ತಲಾ ₹ 25 ಸಾವಿರ ನಗದು ಒಳಗೊಂಡಿದೆ.
ಕನಿಷ್ಠ 10 ವರ್ಷದ ಅನುಭವವುಳ್ಳ 50 ವರ್ಷವಾಗಿರುವ ರಾಜ್ಯದ ಮಹಿಳೆಯರು ಅರ್ಜಿ ಸಲ್ಲಿಸಬೇಕು. ಇರಬೇಕು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಕಡೆಯ ದಿನ.
‘ಮಲ್ಲಮ್ಮ ಯಾಳವಾರ, ಸಬಲಾ ಕ್ಯಾಂಪಸ್, ಬೆಂಗಳೂರು –ಸೋಲಾಪುರ ರಾಷ್ಟ್ರೀಯ ಹೆದ್ದಾರಿ, ಟೊಯೋಟಾ ಶೋರೂಂ ಹತ್ತಿರ, ವಿಜಯಪುರ’ ವಿಳಾಸಕ್ಕೆ ಅರ್ಜಿ ಕಳುಹಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.