ADVERTISEMENT

ಅರಕೇರಿ: ವೃದ್ಧಾಶ್ರಮ ಆರಂಭ ನಾಳೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2022, 15:50 IST
Last Updated 16 ಡಿಸೆಂಬರ್ 2022, 15:50 IST

ವಿಜಯಪುರ: ನಗರದ ಹೊರ ವಲಯದಅರಕೇರಿ ಎಲ್.ಟಿ. ಬಳಿ ವೃದ್ಧರಿಗೆ ನೆಮ್ಮದಿಯ ವಾತಾವರಣ ಕಲ್ಪಿಸಲು ನಿರ್ಮಾಣವಾಗಿರುವ ‘ಸ್ವಾಭಿಮಾನ ಹೌಸ್’ (ಓಲ್ಡೇಜ್‌ ಹೋಮ್) ಡಿ.18ರಂದು ಬೆಳಿಗ್ಗೆ 11ಕ್ಕೆ ಉದ್ಘಾಟನೆಯಾಗಲಿದೆ ಎಂದು ಆಪ್ಟೆ ಫೌಂಡೇಶನ್ ಅಧ್ಯಕ್ಷ ವಿನಯ್ ಆಪ್ಟೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿಶುಕ್ರವಾರ ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಕೊಲ್ಹಾಪುರದ ಪ್ರತಿಭಾ ಅಪ್ಟೆ ಉದ್ಘಾಟನೆ ನೆರವೇರಿಸಲಿದ್ದಾರೆ. ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ, ಬಾಗಲಕೋಟೆ ಲೋಕಾಯುಕ್ತ ಸಿ.ಪಿ.ಐ. ಮಹಿಂದ್ರಕುಮಾರ ನಾಯಿಕ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ ಎಂದರು.

ನಾಲ್ಕು ಎಕರೆ ಸುಂದರ ಪರಿಸರದಲ್ಲಿ ನಿರ್ಮಾಣವಾಗಿರುವ ‘ಸ್ವಾಭಿಮಾನ ಹೌಸ್’ ಇದಾಗಿದೆ. ಇಲ್ಲಿ ಒಟ್ಟು 12 ಕೋಣೆಗಳಿವೆ. 2 ಬೆಡ್‌ಗಳ 9 ಕೋಣೆಗಳು, 4 ಬೆಡ್‌ಗಳ 3 ಕೋಣೆಗಳನ್ನು ನಿರ್ಮಿಸಲಾಗಿದೆ. ಒಟ್ಟು 30 ಜನ ವೃದ್ಧರಿಗೆ ಇಲ್ಲಿ ಅವಕಾಶ ಕಲ್ಪಿಸಲಾಗುವುದು. ಎಲ್ಲ ಅಗತ್ಯ ಮೂಲ ಸೌಲಭ್ಯಗಳ ಕಟ್ಟಡದಲ್ಲಿ ಇವೆ ಎಂದರು.

ADVERTISEMENT

ಇಲ್ಲಿ ತಂಗುವ ವೃದ್ಧರ ಆರೋಗ್ಯದ ಮೇಲೆ 24X7 ನಿಗಾ ಇಡಲು ತಜ್ಞ ದಾದಿ (ನಸ್) ಹಾಗೂ ಅವರ ಅಗತ್ಯ ಸೇವೆಗಳನ್ನು ಪೂರೈಸಲು ಸೇವಾ ಮನೋಭಾವವುಳ್ಳ ಪರಿಚಾರಕರ ಹಾಗೂ ಅಡುಗೆ ತಯಾರಕರು, ಸಹಾಯಕಿಯರ ವಾಸ್ತವ್ಯಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಇಲ್ಲಿದೆ. ಮನೆಯಂತೆ ನಿತ್ಯ ಯೋಗಕ್ಷೇಮ ಮತ್ತು ಅಗತ್ಯತೆ ವಿಚಾರಿಸಲು ಜೊತೆಗೆ ಸಮರ್ಪಣಾ ಮನೋಭಾವದಿಂದ ಹಿರಿಯರ ಸೌಖ್ಯ ನೋಡಿಕೊಳ್ಳಲು ಆಪ್ಟೆ ಫೌಂಡೇಶನ್ ಮುಖ್ಯಸ್ಥ ವಿನಯ್ ಆಪ್ಟೆ ದಂಪತಿ ಸಹ ಈ ಪ್ರದೇಶದಲ್ಲಿಯೇ ವಾಸ್ತವ್ಯ ಇರಲಿದ್ದಾರೆ ಎಂದರು.

ರೋಹನ್ ಆಪ್ಟೆ, ಚೇತನ್ ರಜಪೂತ ಹಾಗೂ ರಾಹುಲ್ ಆಪ್ಟೆಪತ್ರಿಕಾಗೋಷ್ಠಿಯಲ್ಲಿಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.