ತಾಳಿಕೋಟೆ: ದೃಶ್ಯಬಿಂಬ ಕಲಾ ಪ್ರತಿಷ್ಠಾನ ವಿಜಯಪುರದ ವತಿಯಿಂದ ತಾಳಿಕೋಟೆ ಪಟ್ಟಣದ ಖಾಸ್ಗತ ಮಠದ ಪವಾಡಗಳ ಆಧರಿತ ರಾಜ್ಯಮಟ್ಟದ ಚಿತ್ರಕಲಾ ಶಿಬಿರವನ್ನು ಖಾಸ್ಗತೇಶ್ವರಮಠದ ಪೀಠಾಧಿಪತಿ ಬಾಲಶಿವಯೋಗಿ ಸಿದ್ಧಲಿಂಗದೇವರು ಕ್ಯಾನವಾಸ್ ಮೇಲೆ ಚಿತ್ರ ಬರೆಯುವ ಮೂಲಕ ಸೋಮವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಹಿರಿಯ ಕಲಾವಿದರನ್ನು ಒಂದೆಡೆ ಕೂಡಿಸಿ ಅವರಿಂದ ಬರೆಸಿದ ಅಮೂಲ್ಯ ಕಲಾಕೃತಿಗಳಿಂದ ಮಠದ ಕಂಬಗಳಿಗೆ ಜೀವಂತಿಕೆ ಬರಲು ಸಾಧ್ಯವಾಗುತ್ತಿರುವುದು ಸಂತಸ ತಂದಿದೆ. ಕಲಾವಿದರ ಬದುಕು ಗುಲಾಬಿಹೂ ಇದ್ದಂತೆ ಸುಂದರ ಗುಲಾಬಿ ಅವರ ಕಲಾಕೃತಿಯಾದರೆ ಅದರಡಿಯ ಮುಳ್ಳಿನಂತೆ ನೋವು ಸಂಕಷ್ಟದ ಬದುಕು ಕಲಾವಿದರದ್ದು. ಇಚೇಗೆ ಡಿಜಿಟಲ್ ಕ್ರಾಂತಿಯಿಂದ ಚಿತ್ರಕಲೆ ಹಿನ್ನೆಲೆಗೆ ಸರಿಯುತ್ತಿದ್ದರೂ, ಕಲಾವಿದರ ಕೈಚಳಕದ ವೈಭವ ಅದಕ್ಕೆ ಸಾಧ್ಯವಾಗದು ಎಂದರು.
ಹಿರಿಯ ಪತ್ರಕರ್ತ ಜಿ.ಟಿ.ಘೋರ್ಪಡೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಚಿತ್ರ ಕಲಾವಿದರುಗಳಾದ ಕೆ.ಗಂಗಾಧರ, ಎಸ್.ಟಿ.ಕೆಂಭಾವಿ, ಪಿ.ಎಸ್.ಕಡೆಮನಿ, ಎಸ್.ಕೆ.ಪತ್ತಾರ, ಪಿ.ಬಿ.ಗವಾನಿ, ಡಿ.ಕೆ.ಕಾಮಕಾರ, ಅಮಿತ ಕಮ್ಮಾರ, ಬಸವರಾಜ ಅಗ್ನಿ, ಆರ್.ಎಚ್.ಸಾಸನೂರ, ಎಚ್.ಎಸ್.ಮಲ್ಕಾಪುರೆ, ಬಸವರಾಜ ಕುರಿ, ರಾಜು ಸುತಾರ ಅವರುಗಳನ್ನು ಹೂಗಚ್ಛನೀಡಿ ಸ್ವಾಗತಿಸಲಾಯಿತು.
ದೃಶ್ಯಬಿಂಬ ಕಲಾ ಪ್ರತಿಷ್ಠಾನ ವಿಜಯಪುರದ ಅಧ್ಯಕ್ಷ ಸತೀಶ ಕೇಮಶೆಟ್ಟಿ, ಉಪಾಧ್ಯಕ್ಷ ಭೀಮನಗೌಡ ಗುಣಕನಾಳ, ಪದಾಧಿಕಾರಿಗಳು, ಶಿಬಿರದ ಸಂಚಾಲಕರುಗಳಾದ ಕುಮಾರೇಶ್ವರ ಪಬ್ಲಿಕ್ ಸ್ಕೂಲ್ ನ ಅಧ್ಯಕ್ಷ ಕಾಶಿನಾಥ ಸಜ್ಜನ, ಪುರಸಭೆ ಸದಸ್ಯ ಜೈಸಿಂಗ ಮೂಲಿಮನಿ, ವಿಜೆಪಿ ಡೆವೆಲಪರ್ಸ್ ನ ವೀರೇಶಗೌಡ ಪಾಟೀಲ ಮಿಣಜಗಿ, ಮಲ್ಲನಗೌಡ ಪಾಟೀಲ ಬ.ಸಾಲವಾಡಗಿ, ಶಿವು ಸಜ್ಜನ(ದೊಡಮನಿ), ರಾಜು ಮ್ಯಾಗೇರಿ, ಕಲಾವಿದ ದೊಡಮನಿ ಇತರರಿದ್ದರು.
ಅ.9ರಂದು ಸಮಾರೋಪ ನಡೆಯಲಿದ್ದು ಸಮಾರೋಪದ ನಂತರ ಚಿತ್ರಕಲಾವಿದರ ಕಲಾಕೃತಿಗಳನ್ನು ಶ್ರೀಮಠದವರೆಗೆ ಮೆರವಣಿಗೆಯ ಮೂಲಕ ಕೊಂಡೊಯ್ಯಲಾಗುವುದು. ಶಿಬಿರದ ದಾನಿಗಳನ್ನು ಹಾಗೂ ತಾಳಿಕೋಟೆ ಪಟ್ಟಣದ ಐವರು ಹಿರಿಯ ಚಿತ್ರಕಲಾವಿದರನ್ನು ಸಮಾರೋಪದಲ್ಲಿ ಗೌರವಿಸಲಾಗುವುದು ಶಿಬಿರದಲ್ಲಿ 13 ಕಲಾವಿದರುಗಳಿದ್ದು ಬಾಬುರಾವ್ ನಿಡೋಣಿ ಸಂಜೆಗೆ ಬರಲಿದ್ದಾರೆ. ಒಟ್ಟು 13 ಜನ ದಾನಿಗಳು ನೆರವಾಗುತ್ತಿದ್ದಾರೆ ಎಂದು ಸಂಘಟಕರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.