ADVERTISEMENT

ಡಾ.ಕುಸಾಲ್‌ ದಾಸಗೆ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 5:07 IST
Last Updated 13 ಫೆಬ್ರುವರಿ 2026, 5:07 IST
ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜಯಪುರದ ಬಿ. ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಶರೀರ ಕ್ರಿಯಾ ಶಾಸ್ತ್ರವಿಭಾಗದ ಡಿಸ್ಟಿಂಗ್ವಿಷ್ ಚೇರ್ ಪರ್ಸನ್ ಡಾ. ಕುಸಾಲ್‌ ದಾಸ್‌ ಅವರಿಗೆ ಡಾ.ಡಿ.ಕೆ. ಅಗರವಾಲ್‌ ಓರಿಯೇಶನ್ ಅವಾರ್ಡ್-2026 ನೀಡಿ ಗೌರವಿಸಲಾಯಿತು  
ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜಯಪುರದ ಬಿ. ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಶರೀರ ಕ್ರಿಯಾ ಶಾಸ್ತ್ರವಿಭಾಗದ ಡಿಸ್ಟಿಂಗ್ವಿಷ್ ಚೇರ್ ಪರ್ಸನ್ ಡಾ. ಕುಸಾಲ್‌ ದಾಸ್‌ ಅವರಿಗೆ ಡಾ.ಡಿ.ಕೆ. ಅಗರವಾಲ್‌ ಓರಿಯೇಶನ್ ಅವಾರ್ಡ್-2026 ನೀಡಿ ಗೌರವಿಸಲಾಯಿತು     

ವಿಜಯಪುರ: ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶರೀರ ಕ್ರಿಯಾ ಶಾಸ್ತ್ರವಿಭಾಗದ ಡಿಸ್ಟಿಂಗ್ವಿಷ್ ಚೇರ್ ಪರ್ಸನ್ ಡಾ. ಕುಸಾಲ್‌ ದಾಸ ಅವರಿಗೆ ಡಾ.ಡಿ.ಕೆ. ಅಗರವಾಲ್ ಓರಿಯೇಶನ್ ಅವಾರ್ಡ್-2026 ಲಭಿಸಿದೆ.

ನವದೆಹಲಿಯ ಜಾಮೀಯಾ ಹಮದರ್ದ್ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಹೃದಯ ರಕ್ತನಾಳ ವಿಜ್ಞಾನ ಅಕಾಡೆಮಿ ಇತ್ತೀಚೆಗೆ ಆಯೋಜಿಸಿದ್ದ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಸರ್ಬಿಯಾದ ಕರಗುಜೆವಿಕ್ ವಿವಿಯ ಶರೀರಕ್ರಿಯಾ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಯುರೋಪ ಅಕಾಡೆಮಿಯ ಆಫ್ ಕಾರ್ಡಿಯಾಲಜಿ ವಿಭಾಗದ ಅಧ್ಯಕ್ಷ ಡಾ. ವ್ಲಾದಿಮಿರ್‌ ಜಾಕೊಜೆವಿಕ್ ಪ್ರಶಸ್ತಿ ಪ್ರದಾನ ಮಾಡಿದರು.

ADVERTISEMENT

ಡಾ.ಕುಸಾಲ್‌ ದಾಸ ಅವರಿಗೆ ಪ್ರಶಸ್ತಿ ಲಭಿಸಿರುವುದಕ್ಕೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಸುನೀಲಗೌಡ ಪಾಟೀಲ, ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿ ಬಿ. ಎಂ. ಪಾಟೀಲ, ಹಂಗಾಮಿ ಕುಲಪತಿ ಡಾ. ಅರುಣ ಸಿ. ಇನಾಮದಾರ, ರಿಜಿಸ್ಚ್ರಾರ್‌ ಡಾ.ಆರ್.ವಿ. ಕುಲಕರ್ಣಿ ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.