ADVERTISEMENT

ಲಕ್ಷ್ಮಣ ಕಾಳಗಿಗೆ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 5:28 IST
Last Updated 26 ಸೆಪ್ಟೆಂಬರ್ 2025, 5:28 IST
ಕೊಲ್ಹಾರ ಪಟ್ಟಣದ ಪಿಗ್ಮಿ ಕಲೆಕ್ಟರ್‌ ಲಕ್ಷ್ಮಣ ಕಾಳಗಿ ಅವರಿಗೆ ಸತತ 4 ನೇ ಬಾರಿಗೆ ‘ಅತ್ಯುತ್ತಮ ಪಿಗ್ಮಿ ಕಲೆಕ್ಟ‌ರ್ ಪ್ರಶಸ್ತಿ’ ನೀಡಿ ಸಿದ್ದಸಿರಿ ಬ್ಯಾಂಕಿನ ಅಧ್ಯಕ್ಷರಾದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸನ್ಮಾನಿಸಿದರು.
ಕೊಲ್ಹಾರ ಪಟ್ಟಣದ ಪಿಗ್ಮಿ ಕಲೆಕ್ಟರ್‌ ಲಕ್ಷ್ಮಣ ಕಾಳಗಿ ಅವರಿಗೆ ಸತತ 4 ನೇ ಬಾರಿಗೆ ‘ಅತ್ಯುತ್ತಮ ಪಿಗ್ಮಿ ಕಲೆಕ್ಟ‌ರ್ ಪ್ರಶಸ್ತಿ’ ನೀಡಿ ಸಿದ್ದಸಿರಿ ಬ್ಯಾಂಕಿನ ಅಧ್ಯಕ್ಷರಾದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸನ್ಮಾನಿಸಿದರು.   

ಪ್ರಜಾವಾಣಿ ವಾರ್ತೆ

ಕೊಲ್ಹಾರ: ಪಟ್ಟಣದ ಪಿಗ್ಮಿ ಕಲೆಕ್ಟರ್‌ ಲಕ್ಷ್ಮಣ ಕಾಳಗಿ ಅವರಿಗೆ ಸತತ 4 ನೇ ಬಾರಿಗೆ ‘ಅತ್ಯುತ್ತಮ ಪಿಗ್ಮಿ ಕಲೆಕ್ಟ‌ರ್ ಪ್ರಶಸ್ತಿ’ ನೀಡಿ ಸಿದ್ದಸಿರಿ ಬ್ಯಾಂಕಿನ ಅಧ್ಯಕ್ಷರಾದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸನ್ಮಾನಿಸಿದರು.

ವಿಜಯಪುರದಲ್ಲಿ ಇತ್ತೀಚೆಗೆ ನಡೆದ ಸಿದ್ದಸಿರಿ ಬ್ಯಾಂಕಿನ 19ನೇ ವಾರ್ಷಿಕ ಸಭೆಯಲ್ಲಿ ಪ್ರಶಸ್ತಿ ನೀಡಿ ಮಾತನಾಡಿದ ಯತ್ನಾಳ, ‘ಲಕ್ಷ್ಮಣ ಕಾಳಗಿ ಅವರು ತಿಂಗಳಿಗೆ ₹1 ಕೋಟಿ ಪಿಗ್ಮಿ ಸಂಗ್ರಹಿಸುತ್ತಾರೆ. ಅದರಿಂದ ತಿಂಗಳಿಗೆ ₹3 ಲಕ್ಷ ಹಣ ಸಂಪಾದನೆ ಮಾಡಿ, ದುಡಿಮೆಯ ಹಣವನ್ನು ಅನಾಥಾಶ್ರಮಕ್ಕೆ ನೀಡಿ ಸಾಮಾಜಿಕ ಕಳಕಳಿ  ಮೆರೆಯುತ್ತಿರುವುದು ಶ್ಲಾಘನೀಯ’ ಎಂದರು.

ADVERTISEMENT

‘ಶ್ರದ್ಧೆ, ಪ್ರಾಮಾಣಿಕತೆಯಿಂದ ದುಡಿಯುತ್ತಿರುವುದಕ್ಕೆ ಈ ಗೌರವ ಸಿಕ್ಕಿದೆ’ ಎಂದು ಲಕ್ಷ್ಮಣ ಕಾಳಗಿ ಸಂತಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.