ನಾಲತವಾಡ: ಸ್ಥಳೀಯ ಬಸವೇಶ್ವರ ಪ್ರೌಢ ಶಾಲೆಯಲ್ಲಿ ಭಾನುವಾರ ಪಟ್ಟಣ ಪಂಚಾಯಿತಿ ಸದಸ್ಯ ಪೃಥ್ವಿರಾಜನಾಡಗೌಡ ನೇತೃತ್ವದಲ್ಲಿ ಅಯ್ಯನಗುಡಿ ಉತ್ಸವದ ಕುರಿತು ಪೂರ್ವಭಾವಿ ಸಭೆ ನಡೆಯಿತು.
ಗಂಗಾಧರ ರಥೋತ್ಸವದ ಅಂಗವಾಗಿ ಜ.27ರಿಂದ 29 ರವರೆಗೆ ‘ಅಯ್ಯನಗುಡಿ ಉತ್ಸವ-2026’ ಅನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು.
ಜ.27 ರಂದು ಪಟ್ಟಣದ ವಿವಿಧ ಶಾಲೆಯ ಮಕ್ಕಳ ಸ್ತಬ್ಧ ಚಿತ್ರಗಳ ಮೆರವಣಿಗೆ, ಕಳಸಾರೋಹಣ, ರಾಜ್ಯ, ಜಿಲ್ಲಾಮಟ್ಟದ ನಾನಾ ಸಾಂಸ್ಕೃತಿಕ ಕಲಾತಂಡಗಳಿಂದ ನೃತ್ಯ ಪ್ರದರ್ಶನ, ಮಂಗಳೂರಿನ ಕಾಂತಾರ ನೃತ್ಯ, ಕೊಟ್ಟೂರಿನ ನಂದಿ ಧ್ವಜ ಕುಣಿತ ಸೇರಿದಂತಡ ವಿವಿಧ ಭಾಗದ ಕುಣಿತಗಳು ನಡೆಯಲಿದೆ. ಮಧ್ಯಾಹ್ನ ಅಯ್ಯನಗುಡಿಯಲ್ಲಿ ಗಂಗಾಧರ ಸ್ವಾಮಿಗೆ ಉಜ್ವಲಾದೇವಿ ಹಾಗೂ ಸೋಮಶೇಖರ ನಾಡಗೌಡ ನೇತೃತ್ವದ ತನಾರತಿ ಸೇವೆ ನಡೆಯಲಿದೆ.
ಜ.28 ರಂದು 4.30ಕ್ಕೆ ರಥೋತ್ಸವ, ಸಂಜೆ 7ಕ್ಕೆ ಅದ್ವಿಕಾ ಸಾಂಸ್ಕೃತಿಕ ಕಲಾತಂಡದ ಮನರಂಜನೆ ಕಾರ್ಯಕ್ರಮ ನಡೆಯಲಿದೆ.
ರಾತ್ರಿ 9ಕ್ಕೆ ದಿ.ಶಂಕರರಾವ್ ನಾಡಗೌಡ ವೇದಿಕೆ ಉದ್ಘಾಟನೆ ನಡೆಯಲಿದ್ದು, ಶಾಸಕ ಸಿ.ಎಸ್.ನಾಡಗೌಡ ಅಧ್ಯಕ್ಷತೆ ವಹಿಸುವರು. ಬಾದಾಮಿಯ ಸಿದ್ದನಕೊಳದ ಶಿವಕುಮಾರ ಸ್ವಾಮೀಜಿ ಹಾಗೂ ಗುರುಮೂರ್ತಿ ಕಣಕಾಲಮಠ ಉಪಸ್ಥಿತಿಯಲ್ಲಿ ಪೃಥ್ವಿರಾಜ್ ನಾಡಗೌಡ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ 7 ಗೋಲ್ಡನ್ ಸ್ಟಾರ್ ಸುರೇಶ, ಎಂಜಿಎಂಕೆ ಪ್ರಾಚಾರ್ಯ ಎಸ್.ಕೆ.ಹರನಾಳ, ಮುಖ್ಯ ಶಿಕ್ಷಕ ಆಲೂರಿನ ನಿವೃತ್ತ ಜಿ.ಎಚ್.ಪಾಟೀಲ, ಬಸವರಾಜ ಹಂಚಲಿ, ಡಾ.ಬಲವಂತ ಉಣ್ಣಿಬಾವಿ, ಪೋಲೀಸ್ ಪಾಟೀಲ ಪಾಲ್ಗೊಳ್ಳಲಿದ್ದಾರೆ.
ನಾಲತವಾಡದ ಶ್ರೇಯಾ ತಳವಾರ ಭರತನಾಟ್ಯ, ‘ತಾಯಿಗೆ ತುತ್ತು ಮಗನಿಗೆ ಕುತ್ತು’ ನಾಟಕ ಪ್ರದರ್ಶನವಾಗಲಿದೆ. ಜ.29ರಂದು ಎನ್‌ಕೆ ಮೆಲೋಡಿಸ್ ರಸಮಂಜರಿ, ನಂದಿನಿ ಬೆಂಗಳೂರ ಅವರಿಂದ ನೃತ್ಯ ಹಾಗೂ ರೇಖಾ ಲಿಂಗಸಗೂರ ಅವರಿಂದ ಗಾಯನ, 7.30ಕ್ಕೆ ಗೀಗಿ ಪದ, 11ಕ್ಕೆ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತೀರ್ಮಾನಿಸಲಾಯಿತು.
ಮುತ್ತು ಗೊರಬಾಳ, ಶಿವಪ್ಪಗೌಡ ತಾತರಡ್ಡಿ, ಬಾಬು ಡೇರೆದ, ಗನಿಸಾಬ ಖಾಜಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.