ಕೊಲ್ಹಾರ: ತ್ಯಾಗ ಬಲಿದಾನದ ಸಂಕೇತವಾಗಿರುವ ಪವಿತ್ರ ಬಕ್ರೀದ್ ಹಬ್ಬದ ಪ್ರಯುಕ್ತ ಕೊಲ್ಹಾರ ಪಟ್ಟಣದ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ವೀಳ್ಯದೆಲೆ ವಿನಿಮಯದ ಮೂಲಕ ಹಿಂದೂ ಹಾಗೂ ಮುಸ್ಲಿಮರು ಪರಸ್ಪರ ಬಕ್ರೀದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಮುಖಂಡ ಉಸ್ಮಾನಪಟೇಲ್ ಖಾನ್ ಮಾತನಾಡಿ, ಕೊಲ್ಹಾರ ಪಟ್ಟಣ ಭಾವೈಕ್ಯಕ್ಕೆ ಹೆಸರಾಗಿದೆ. ಪ್ರಮುಖ ಹಬ್ಬ ಹರಿದಿನಗಳಲ್ಲಿ ಹಿಂದೂ ಹಾಗೂ ಮುಸ್ಲಿಮರು ಪರಸ್ಪರ ವೀಳ್ಯದೆಲೆ ವಿನಿಮಯದಂತಹ ವಿಶಿಷ್ಟ ಸಂಪ್ರದಾಯದ ಆಚರಣೆಯಿಂದ ಭಾತೃತ್ವ ಸಾರುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ವಿವಿಧೆತೆಯಲ್ಲಿ ಏಕತೆಯನ್ನು ಸಾರುವ ಮೂಲಕ ಜಾಗತಿಕ ಇತಿಹಾಸದಲ್ಲಿ ನಮ್ಮ ಭಾರತ ದೇಶದಂತಹ ರಾಷ್ಟ್ರ ಮತ್ತೊಂದಿಲ್ಲ ಇಂತಹ ಭವ್ಯ ಭಾರತದಲ್ಲಿ ಜನಿಸಿರುವ ನಾವುಗಳೇ ಪುಣ್ಯವಂತರು ಎಂದರು.
ಪ್ರಸಕ್ತ ವರ್ಷ ಹಜ್ ಯಾತ್ರೆಗೆ ತೆರಳಿರುವ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಹಜ್ ಆಯೋಜಕರೊಂದಿಗೆ ₹ 146 ಕೋಟಿ ನಮ್ಮ ಭಾರತಿಯರ ಪರವಾಗಿ ನಾನು ಹಜ್ ಯಾತ್ರೆಗೆ ಆಗಮಿಸಿದ್ದೇನೆ ಎನ್ನುವ ಮೂಲಕ ಭಾರತದ ಏಕತೆಯನ್ನು ಜಾಗತಿಕ ಮಟ್ಟದಲ್ಲಿ ಸಾರಿದ್ದಾರೆ ಎಂದರು.
ಪಟ್ಟಣ ಪಂಚಾಯಿತಿ ಸದಸ್ಯ ಬಾಬು ಬಜಂತ್ರಿ ಮಾತನಾಡಿ, ಬಕ್ರೀದ್ ದಿನದಂದು ಹಿಂದೂ ಹಾಗೂ ಮುಸ್ಲಿಮರು ಇಲ್ಲಿ ಸೇರುವ ಮೂಲಕ ಏಕತೆಯ ಸಂದೇಶ ಸಾರುತ್ತಿದ್ದೇವೆ ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಚನ್ನಮಲ್ಲಪ್ಪ ಗಿಡ್ಡಪ್ಪಗೋಳ,ಪ್ರಮುಖರಾದ ಉಸ್ಮಾನಪಟೇಲ್ ಖಾನ್, ಬಿ.ಯು ಗಿಡ್ಡಪ್ಪಗೋಳ, ಆರ್.ಬಿ ಪಕಾಲಿ, ಮಹಮ್ಮದಸಾಬ ಹೊನ್ಯಾಳ, ಪಿ.ಕೆ ಗಿರಗಾವಿ, ಇಸ್ಮಾಯಿಲಸಾಬ ತಹಶೀಲ್ದಾರ್, ಮಹಾಂತೇಶ್ ಗಿಡಪ್ಪಗೋಳ, ಹನೀಪ ಮಕಾನದಾರ, ಬನಪ್ಪ ಬಾಲಗೊಂಡ, ಎಂ.ಆರ್ ಕಲಾದಗಿ, ಅನ್ವರ್ ಕಂಕರಪೀರ, ದಶರಥ ಈಟಿ, ದಸ್ತಗೀರ ಕಲಾದಗಿ, ಬಾಬು ಭಜಂತ್ರಿ ಸಹಿತ ಇನ್ನಿತರರು ಇದ್ದರು. ಎಂ.ಆರ್ ಕಲಾದಗಿ ಕಾರ್ಯಕ್ರಮವನ್ನು ನಿರೂಪಿಸಿ ಒಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.