ADVERTISEMENT

ಆಲಮಟ್ಟಿ: ಬನಶಂಕರಿ ದೇವಿ ಪಲ್ಲಕ್ಕಿ ಉತ್ಸವ

​ಪ್ರಜಾವಾಣಿ ವಾರ್ತೆ
Published 25 ಮೇ 2025, 13:13 IST
Last Updated 25 ಮೇ 2025, 13:13 IST
ಬನಶಂಕರಿ ದೇವಿ
ಬನಶಂಕರಿ ದೇವಿ   

ಆಲಮಟ್ಟಿ: ಬಾದಾಮಿಯಲ್ಲಿ ಅಮವಾಸ್ಯೆ ಅಂಗವಾಗಿ ಸಮೀಪದ ವಂದಾಲ ಗ್ರಾಮದಲ್ಲಿ ಮೇ 27 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಕಲ ಸಮಾಜದ ಸಮ್ಮುಖದಲ್ಲಿ ನೆರವೇರಲಿವೆ.

ಅಂದು ಬೆಳಿಗ್ಗೆ 8 ಸಂಗಮೇಶ್ವರ ದೇವಸ್ಥಾನದಿಂದ ಹೊರಡಲಿರುವ ಬೃಹತ್ ಕುಂಭಮೇಳ ಮೆರವಣಿಗೆ ಸಕಲ ವಾದ್ಯಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಬನಶಂಕರಿ ದೇವಸ್ಥಾನ ತಲುಪಲಿದೆ. ನಂತರ ಬನಶಂಕರಿ ದೇವಿಗೆ ಮಹಾ ರುದ್ರಾಭಿಷೇಕ, ವಿಶೇಷ ಪೂಜಾ ಕಾರ್ಯಕ್ರಮಗಳೆಲ್ಲ ಜರುಗಲಿವೆ.

ಮಧ್ಯಾಹ್ನ 1.30 ಕ್ಕೆ ಪವಾಡ ಬಸವೇಶ್ವರ ಮಠದಲ್ಲಿ ನೆರೆದಂತ ಭಕ್ತಾದಿಗಳಿಗೆ ಅನ್ನಪ್ರಸಾದ ಇರುವುದು. ಸಂಜೆ 7 ಕ್ಕೆ ಪುರವಂತರ ವೀರಗಾಸೆಯ ಸೇವೆಯೊಂದಿಗೆ ಬನಶಂಕರಿ ದೇವಿಯ ಪಲ್ಲಕ್ಕಿ ಉತ್ಸವ ಇರುವುದೆಂದು ಮಹೋತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.