ADVERTISEMENT

ಬಸವನಬಾಗೇವಾಡಿ | ಬಂಜಾರ ಸಮಾಜದವರು ಶಿಕ್ಷಣಕ್ಕೆ ಆದ್ಯತೆ ನೀಡಿ: ಶಿವಾನಂದ ಪಾಟೀಲ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 8:23 IST
Last Updated 5 ಆಗಸ್ಟ್ 2025, 8:23 IST
ಬಸವನಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಗ್ರಾಮದ ಸರ್ಕಾರಿ ಶಾಲೆಗೆ ಸಚಿವ ಶಿವಾನಂದ ಪಾಟೀಲ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು
ಬಸವನಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಗ್ರಾಮದ ಸರ್ಕಾರಿ ಶಾಲೆಗೆ ಸಚಿವ ಶಿವಾನಂದ ಪಾಟೀಲ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು   

ಬಸವನಬಾಗೇವಾಡಿ: ‘ಶ್ರಮಜೀವಿಗಳಾಗಿರುವ ಬಂಜಾರ ಸಮಾಜದವರಲ್ಲಿ ದೈವ ಭಕ್ತಿ ಅಪಾರ. ಉಕ್ಕಲಿ ತಾಂಡಾ ನಿವಾಸಿಗಳು ದೇವಸ್ಥಾನ ಕಟ್ಟಲು ತೋರುವ ಆಸಕ್ತಿಯ ಜೊತೆಗೆ ನಿಮ್ಮ ಮಕ್ಕಳ ಉನ್ನತ ಭವಿಷ್ಯಕ್ಕಾಗಿ ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡಬೇಕು’ ಎಂದು ಸಚಿವ ಶಿವಾನಂದ ಪಾಟೀಲ ಸಲಹೆ ನೀಡಿದರು.

ಬಸವನಬಾಗೇವಾಡಿ ಮತಕ್ಷೇತ್ರ ವ್ಯಾಪ್ತಿಯ ಉಕ್ಕಲಿ ತಾಂಡಾದಲ್ಲಿ ಸಂತ ಸೇವಾಲಾಲ್ ಮೂರ್ತಿ ಪ್ರತಿಷ್ಠಾಪನೆ ಹಾಗೂ ಅಂಗನವಾಡಿ ನೂತನ ಕಟ್ಟಡ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ‘ಈಗಾಗಲೇ ಬಂಜಾರ ಸಮುದಾಯದ ಜನರು ಉನ್ನತ ಶಿಕ್ಷಣ ಪಡೆದು ಐಎಎಸ್, ಐಪಿಎಸ್, ಕೆಎಎಸ್, ಎಂಜಿನಿಯರ್ ಸೇರಿದಂತೆ ವಿವಿಧ ಉನ್ನತ ಹುದ್ದೆಯಲ್ಲಿದ್ದಾರೆ. ಹೀಗಾಗಿ ನಿಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಿ’ ಎಂದು ತಿಳಿಸಿದರು.

ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ ಮನಗೂಳಿ, ಉಕ್ಕಲಿ ಗ್ರಾ.ಪಂ. ಅಧ್ಯಕ್ಷ ನಿಂಗೊಂಡ ಸಿಂದಗಿ, ಉಪಾಧ್ಯಕ್ಷ ಅಪ್ಪಣ್ಣ ಬ್ಯಾಕೋಡ, ಮಾಜಿ ಉಪಾಧ್ಯಕ್ಷ ಅಶೋಕ ಇಂಡಿ, ಗ್ರಾಮದ ಹಿರಿಯರಾದ ಎ.ಎಂ.ಪಾಟೀಲ, ಬಸಪ್ಪ ಹನುಮಶೆಟ್ಟಿ, ಬಾಳಾಸಾಹೇಬ ಮಸಳಿ, ಬಸವರಾಜ ದೊಡಮನಿ, ರೇವು ರಾಠೋಡ, ಸಂತೋಷ ರಾಠೋಡ, ದಾಮು ನಾಯಕ, ಗಣಪತಿ ನಾಯಕ, ವಿಲಾಸ ರಾಠೋಡ, ಪಾಂಡು ನಾಯಕ, ಬಸವನಬಾಗೇವಾಡಿ ತಹಸೀಲ್ದಾರ ವೈ.ಎಸ್. ಸೋಮನಕಟ್ಟಿ, ತಾ.ಪಂ. ಇಒ ಪ್ರಕಾಶ ದೇಸಾಯಿ, ಬಿಇಒ ವಸಂತ ರಾಠೋಡ, ಸಿಡಿಪಿಓ ಶಿಲ್ಪಾ ಹಿರೇಮಠ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.