ವಿಜಯಪುರ: ಬ್ಯಾಂಕ್ ಉದ್ಯೋಗಿಗಳಿಗೆ ಆದ್ಯತೆ ಮೇರೆಗೆ ಕೋವಿಡ್ ಲಸಿಕೆ ನೀಡಬೇಕು ಹಾಗೂ ಬ್ಯಾಂಕುಗಳನ್ನು ವಾರದಲ್ಲಿ ಮೂರು ದಿನ ಮಾತ್ರ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು ಎಂದು ಅಖಿಲ ಭಾರತ ಗ್ರಾಮೀಣ ಬ್ಯಾಂಕ್ ನೌಕರರ ಸಂಘ ಆಗ್ರಹಿಸಿದೆ.
ಕೊರೊನಾ ಹಳ್ಳಿಗಳತ್ತ ಮುಖಮಾಡಿ ಹಳ್ಳಿಯ ಜನಜೀವನ ಅಸ್ತವ್ಯಸ್ತ ಮಾಡಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಕಾರ್ಯ ನಿರ್ವಹಿಸಿ ಗ್ರಾಮೀಣ ಜನರಿಗೆ ಮತ್ತು ರೈತರಿಗೆ ಹಣಕಾಸು ಸೇವೆಯನ್ನು ಪೂರೈಸುತ್ತಿದ್ದಾರೆ ಎಣದಯ ಸಂಘ ಹೇಳಿದೆ.
ಗ್ರಾಮೀಣ ಬ್ಯಾಂಕಿನ ಹಲವಾರು ನೌಕರರು ಕೊರೊನಾದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದು, ನಮ್ಮ ರಕ್ಷಣೆಗಾಗಿ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಜಿ.ಗಾಂಧಿ, ಪದಾಧಿಕಾರಿಗಳಾದ ಶಿವಾಜಿ ಇನಾಮದಾರ, ಸಿ.ಎ. ಗಂಟೆಪ್ಪಗೋಳ, ಸುನೀಲ ನಾಯ್ಕ ಹಾಗೂ ಬಸವರಾಜ ಸರಬಡಗಿ ಅವರು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.