ADVERTISEMENT

ಬರಡೋಲ: ಮಲ್ಲಿಕಾರ್ಜನ ಜಾತ್ರೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 13:14 IST
Last Updated 12 ಡಿಸೆಂಬರ್ 2018, 13:14 IST
11ಸಿಡಿಎನ್-01 ಶ್ರೀ ಮಲ್ಲಿಕಾರ್ಜುನ ದೇವರು
11ಸಿಡಿಎನ್-01 ಶ್ರೀ ಮಲ್ಲಿಕಾರ್ಜುನ ದೇವರು   

ಚಡಚಣ: ಇಲ್ಲಿಗೆ ಸಮೀಪದ ಬರಡೋಲ ಗ್ರಾಮದ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವ ಮತ್ತು ಹಜರತ್ ಮಹಜೀದ ದೇವರ ಉರುಸ್‌ ಬುಧವಾರ ಚಾಲನೆಗೊಂಡಿದ್ದು, ಇದೇ 14ರವರೆಗೆ ಜರುಗಲಿದೆ ಎಂದು ಜಾತ್ರಾ ಸಮಿತಿ ಅಧ್ಯಕ್ಷ ಶ್ರೀಶೈಲಗೌಡ ಬಿರಾದಾರ ತಿಳಿಸಿದ್ದಾರೆ.

13ರಂದು ಮಲ್ಲಿಕಾರ್ಜುನ ದೇವರ ಪಾದಗಟ್ಟಿಯಿಂದ ನಂದಿ ದ್ವಜದ ಮೆರವಣಿಗೆ ದೇವಾಲಯಕ್ಕೆ ಬರುವುದು. ಹಜರತ್ ಮಹಜೀದ ದೇವರ ಮಸೀದಿವರೆಗೆ ಬಂದ ನಂತರ ಉರುಸ್ ನಡೆಯಲಿದೆ. ರಾತ್ರಿ 9 ಗಂಟೆಗೆ ಮಹಾಲಿಂಗಪುರದ ಸಪ್ತಸ್ವರ ಮೆಲೋಡಿ ಆರ್ಕೆಸ್ಟ್ರಾ ತಂಡದಿಂದ ರಸಮಂಜರಿ ನಡೆಯಲಿದೆ.

14ರ ಬೆಳಿಗ್ಗೆ 10 ಗಂಟೆಗೆ ಹರದೇಶಿ ನಾಗೇಶ ಗೀ ಗೀ ಪದಗಳ ಹಾಡಿಕೆ ಕಾರ್ಯಕ್ರಮ, ಸಂಜೆ 4ಕ್ಕೆ ಜಂಗಿ ನಿಕಾಲಿ ಕುಸ್ತಿ ನಡೆಯಲಿವೆ. ರಾತ್ರಿ 'ಚನ್ನಪ್ಪ ಚನ್ನಗೌಡ' ಎಂಬ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.