ADVERTISEMENT

ವಿಜಯಪುರ: ಬೆರಗು ಪ್ರಶಸ್ತಿಗೆ ಕೃತಿಗಳ ಆಹ್ವಾನ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 4:30 IST
Last Updated 24 ಆಗಸ್ಟ್ 2025, 4:30 IST
<div class="paragraphs"><p>ಸಾದರ ಸ್ವೀಕಾರ</p></div>

ಸಾದರ ಸ್ವೀಕಾರ

   

ಆಲಮೇಲ: ವಿಜಯಪುರ ಜಿಲ್ಲೆಯ ಕಡಣಿ ಗ್ರಾಮದ ಬೆರಗು ಪ್ರಕಾಶನವು ರಾಜ್ಯಮಟ್ಟದ ಪ್ರೊ ಎಚ್.ಟಿ. ಪೋತೆ ಪ್ರಶಸ್ತಿ ನೀಡಲು ಹಸ್ತಪ್ರತಿಗಳನ್ನು ಆಹ್ವಾನಿಸಿದೆ. ಪ್ರಶಸ್ತಿ ₹10 ಸಾವಿರ ನಗದು, ಪ್ರಶಸ್ತಿ ಫಲಕ ಸ್ಮರಣಿಕೆ ಒಳಗೊಂಡಿದೆ. ಆಯ್ಕೆಯಾದ ಹಸ್ತಪ್ರತಿಯನ್ನು ಪ್ರಕಾಶನದಿಂದ ಪ್ರಕಟಿಸಿ ಪ್ರಕಾಶನದ 8ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಚಾಲಕಿ ವಿಜಯಲಕ್ಷ್ಮಿ ಕತ್ತಿ ತಿಳಿಸಿದ್ದಾರೆ.

ಸಂಶೋಧನೆ ಮತ್ತು ಅನುವಾದಿತ ಸಂಬಂಧಿ ಬರಹಗಳು ಮುದ್ರಣಕ್ಕೆ ಸಿದ್ದಪಡಿಸಿದ್ದರೆ ಅಂತಹ ಹಸ್ತಪ್ರತಿಗಳನ್ನು ನುಡಿ ಅಥವಾ ಬರಹದಲ್ಲಿ ಟೈಪ್ ಮಾಡಿದ ತಮ್ಮ ಅಪ್ರಕಟಿತ ಕೃತಿಯ ಎರಡು ಪ್ರತಿಗಳನ್ನು ಸೆಪ್ಟೆಂಬರ್ 25ರೊಳಗೆ ತಲುಪುವಂತೆ ಕಳಿಸಲು ಕೋರಲಾಗಿದೆ.

ADVERTISEMENT

ಪ್ರಕಟಿತ ಕೃತಿಗಳ ಆಹ್ವಾನ:

ಕಡಣಿ ಬೆರಗು ಪ್ರಕಾಶನವು ದಿ. ಯಮುನಾಬಾಯಿ ರಾಜಣ್ಣ ಭೋವಿ ಸ್ಮರಣಾರ್ಥ ಅವರ ಹೆಸರಿನಲ್ಲಿ ಪ್ರತಿವರ್ಷ ನೀಡುವ ಬೆರಗು ಪ್ರಶಸ್ತಿ ನೀಡಲು 2024ನೇ ಸಾಲಿನಲ್ಲಿ ಪ್ರಕಟವಾದ ಸಾಹಿತ್ಯದ ಎಲ್ಲ ಪ್ರಕಾರಗಳ ಕೃತಿಗಳನ್ನು ಆಹ್ವಾನಿಸಿದೆ. ಪ್ರಶಸ್ತಿಯು ₹ 5 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ.

ಆಸಕ್ತ ಲೇಖಕರು ತಮ್ಮ ಕೃತಿಯ ಎರಡು ಪ್ರತಿಗಳನ್ನು ಸೆಪ್ಟೆಂಬರ್ 25ರೊಳಗೆ ಸಲ್ಲಿಸಬೇಕು. ಪಿಎಚ್‌ಡಿ ಪ್ರಬಂಧ ಹೊರತುಪಡಿಸಿ ಕನ್ನಡದ ಎಲ್ಲ ಪ್ರಕಾರದ ಪುಸ್ತಕಗಳನ್ನು ಪ್ರಶಸ್ತಿಗೆ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.  ಹಸ್ತಪ್ರತಿ ಮತ್ತು ಪುಸ್ತಕ ಕಳಿಸುವ ವಿಳಾಸ: ವಿಜಯಲಕ್ಷ್ಮಿ ಆರ್. ಕತ್ತಿ, ಬೆರಗು ಪ್ರಕಾಶನ, ವಿನಾಯಕ ನಗರ, ಆಲಮೇಲ -586 202, ತಾ: ಆಲಮೇಲ, ಜಿಲ್ಲೆ: ವಿಜಯಪುರ, ಮೊ: 7795341335

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.