ADVERTISEMENT

‘ಬಿಜೆಪಿಯಿಂದ ಯುವಕರ ಶ್ರೆಯೋಭಿವೃದ್ದಿ’

ಶಹಪೂರ, ನಿರಾಣಿ ಪರ ಸಂಸದ ರಮೇಶ ಜಿಗಜಿಣಗಿ ಮತಯಾಚನೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2022, 12:48 IST
Last Updated 11 ಜೂನ್ 2022, 12:48 IST
ವಿಜಯಪುರದಲ್ಲಿ ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರು ವಿಧಾನ ಪರಿಷತ್‌ ಚುನಾವಣೆ ಅಂಗವಾಗಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದರು
ವಿಜಯಪುರದಲ್ಲಿ ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರು ವಿಧಾನ ಪರಿಷತ್‌ ಚುನಾವಣೆ ಅಂಗವಾಗಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದರು   

ವಿಜಯಪುರ: ವಾಯವ್ಯ ಶಿಕ್ಷಕರ ಮತಕ್ಷೇತ್ರದ ಅಭ್ಯರ್ಥಿ ಅರುಣ ಶಹಾಪುರ ಹಾಗೂ ಪದವೀಧರ ಮತಕ್ಷೇತ್ರದ ಅಭ್ಯರ್ಥಿ ಹಣಮಂತ ನಿರಾಣಿ ಪರವಾಗಿ ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಬಿರುಸಿನ ಪ್ರಚಾರ ನಡೆಸಿದರು.

ನಗರದ ರವೀಂದ್ರನಾಥ್ ಟ್ಯಾಗೋರ್‌ ಶಾಲೆ, ಸರ್ಕಾರಿ ಐಟಿಐ, ಶಾರದಾ ಪಬ್ಲಿಕ್ ಶಾಲೆ ಸೇರಿದಂತೆ ಹಲವಾರು ಶಾಲಾ ಕಾಲೇಜುಗಳಿಗೆ ಹಾಗೂ ಕುಮದಾ ಕಾರ್ಸ್, ನಾರಾಯಣ ಕಾರ್ಸ್‌ ಶೋರೂಂಳಿಗೆ ತೆರಳಿ ಮತಯಾಚಿಸಿದರು.

ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಶಿಕ್ಷಣ ಕ್ಷೇತ್ರದ ಬಲವರ್ಧನೆ ಹಾಗೂ ಯುವಕರ ಶ್ರೆಯೋಭಿವೃದ್ದಿ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದರು.

ADVERTISEMENT

ಅರುಣ ಶಹಾಪೂರ ಶಿಕ್ಷಕರ ಪ್ರಬಲ ಧ್ವನಿಯಾಗಿ ಮೇಲ್ಮನೆಯಲ್ಲಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ ಹಣಮಂತ ನಿರಾಣಿ ಸಹ ಜನಪರ, ಯುವಕರ ಪರ ಸದಾ ಧ್ವನಿಯಾಗಿದ್ದಾರೆ. ಇಬ್ಬರಿಗೂ ಪುನಃ ಆಶೀರ್ವಾದ ಮಾಡಬೇಕು ಎಂದು ಮತದಾರದಲ್ಲಿ ಮನವಿ ಮಾಡಿದರು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಸರ್ಕಾರದ ಸಾಧನೆ ನರೇಂದ್ರ ಮೋದಿ, ಜನಪ್ರೀಯತೆ ಹಾಗೂ ಜನಪರ ಯೋಜನೆಗಳ ಫಲಾವಾಗಿ ಮತದಾರರು ಬಿಜೆಪಿ ಪರ ಒಲವು ತೋರಿದ್ದಾರೆ. ವಾಯವ್ಯ ಶಿಕ್ಷಕರ ಮತ್ತು ಪದವಿಧರ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದರು.

ಓಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾತನಾಡಿ, ಅರುಣ ಶಹಾಪೂರ ಮತ್ತು ಹಣಮಂತ ನಿರಾಣಿ ಇಬ್ಬರು ಶಿಕ್ಷಕರು ಮತ್ತು ಪದವಿದರರ ಆಶೋತ್ತರಗಳಿಗೆ ಸ್ಪಂದಿಸುವ ಮನೋಭಾವನೆಯನ್ನು ಅಳವಡಿಸಿಕೊಂಡಿದ್ದಾರೆ. ವ್ಯವಸ್ಥೆ ಬದಲಾವಣೆಗೆ ಬಿಜೆಪಿ ಅಭ್ಯರ್ಥಿಗಳಿಗೆ ಆರಿಸಿ ತರಬೇಕು ಎಂದು ಮನವಿ ಮಾಡಿಕೊಂಡರು.

ಬೆಳಗಾವಿ ವಿಭಾಗದ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೊಟ, ಬಿಜೆಪಿ ಮುಖಂಡರು ಸುರೇಶ್ ಬಿರಾದಾರ, ಭೀಮಾಶಂಕರ ಹದನೂರ, ವಿಜಯ ಜೋಶಿ, ಗೋಪಾಲ ಘಟಕಾಂಬಳೆ, ಮಳುಗೌಡ ಪಾಟೀಲ, ಶಂಕರ ಕುಂಬಾರ, ವಿಠ್ಠಲ ನಡುವಿನಕೇರಿ, ಸಿದ್ದು ಮಲ್ಲಿಕಾರ್ಜುನಮಠ, ರಾಜೇಂದ್ರ ವಾಲಿ, ವಿಕಾಸ ಪದಕಿ, ಸನ್ನಿ ಗವಿಮಠ ಆನಂದ ಮುಚ್ಚಂಡಿ, ಜಗದೀಶ ಮುಚ್ಚಂಡಿ, ಕಾಂತು ಶಿಂದೆ, ವಿನಾಯಕ ದಹಿಂಡೆ, ರಾಜೇಶ ತೌಸೆ, ರಮೇಶ ದೇವಕರ, ಸತೀಶ್ ಪಾಟೀಲ, ಅನಿಲ್ ಉಪ್ಪಾರ, ಅನಿಲ ಹಳಗೋದಿ, ವಿಜಯ್‌ ಜೋಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.