ವಿಜಯಪುರ: ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಹಂಗಾಮಿ ಉಪಕುಲಪತಿಯಾಗಿ ಡಾ.ಆರ್.ಎಸ್.ಮುಧೋಳ ನೇಮಕಗೊಂಡಿದ್ದಾರೆ.
ಡಾ.ಆರ್.ಎಸ್.ಮುಧೋಳ ಅವರು ಮೂಲತಃ ಅಥಣಿ ತಾಲ್ಲೂಕಿನ ಕೋವಳ್ಳಿ ಗ್ರಾಮದರು. ಬೆಳಗಾವಿ ಕೆ.ಎಲ್.ಇ ಜವಹರಲಾಲ್ ನೆಹರು ವೈದ್ಯಕೀಯ ಕಾಲೇಜಿನಲ್ಲಿ ಹಾಗೂ ಕೆ.ಎಲ್.ಇ ಡಾ. ಪ್ರಭಾಕರ ಕೋರೆ ಅವರ ಆಸ್ಪತ್ರೆಯಲ್ಲಿ ಪ್ರಾಧ್ಯಾಪಕ, ವಿಭಾಗ ಮುಖ್ಯಸ್ಥ ಉಪಪ್ರಾಚಾರ್ಯ, ಆಸ್ಪತ್ರೆಯ ನಿರ್ದೇಶಕರಾಗಿ 35 ವರ್ಷಗಳ ಆಡಳಿತದ ಅನುಭವ ಹೊಂದಿದ್ದಾರೆ.
ಕಿವಿ, ಮೂಗು ಮತ್ತು ಗಂಟಲು ತಜ್ಞರು ಆಗಿರುವ ಡಾ.ಆರ್.ಎಸ್.ಮುಧೋಳ ಅವರು 4 ತಿಂಗಳ ಹಿಂದೆ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಸಮ ಉಪಕುಲಪತಿಯಾಗಿ ನೇಮಕಗೊಂಡಿದ್ದರು. ಸದ್ಯ ಉಪಕುಲಪತಿಯಾಗಿದ್ದ ಡಾ.ಎಂ.ಎಸ್.ಬಿರಾದಾರ ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ಡಾ. ಆರ್.ಎಸ್.ಮುಧೋಳ ಅವರನ್ನು ಹಂಗಾಮಿ ಉಪಕುಲಪತಿಯಾಗಿ ನೇಮಕಗೊಳಿಸಲಾಗಿದೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿ.ವಿ ಕುಲಪತಿ ಎಂ.ಬಿ.ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.