
ವಿಜಯಪುರ: ನಗರದ ಎಂ.ಜಿ.ರಸ್ತೆಯ ಮಿಲನ್ ಆರ್ಕೆಡ್‌ನಲ್ಲಿರುವ ‘ಮಲಬಾರ್ ಗೋಲ್ಡ್ ಮತ್ತು ಡೈಮಂಡ್’ ಮಳಿಗೆಯಲ್ಲಿ ‘ಬ್ರೈಡ್ಸ್ ಆಫ್ ಇಂಡಿಯಾ’ ಶೋ ಕಾರ್ಯಕ್ರಮ ಆರಂಭವಾಗಿದ್ದು, ಈ ಶೋ ಡಿ.15ರ ವರೆಗೆ ಜರುಗಲಿದೆ.
ಭಾರತೀಯ ವಿವಾಹಗಳ ಸೊಬಗು, ಸಂಪ್ರದಾಯವನ್ನು ಪ್ರತಿನಿಧಿಸುವ ವಧುವಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ಚಿನ್ನ, ವಜ್ರ ಮತ್ತು ಅಮೂಲ್ಯ ರತ್ನಗಳ ಆಭರಣಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಎಲ್ಲ ಚಿನ್ನ, ರತ್ನ, ವಜ್ರ ಆಭರಣಗಳ ಮೇಲೆ ಶೇ 30 ರಷ್ಟು ಕಡಿತ ಮಾಡಲಾಗುವುದು ಎಂದು ಮಲಬಾರ್ ಗೋಲ್ಡ್ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
‘ಬ್ರೈಡ್ಸ್ ಆಫ್ ಇಂಡಿಯಾ’ ಶೋ ಕಾರ್ಯಕ್ರಮಕ್ಕೆ ಪ್ರೀತಿ ವಿಜುಗೌಡ ಪಾಟೀಲ, ವಂಶಿಕಾ ಪಾಟೀಲ ಚಾಲನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.