ADVERTISEMENT

ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆ ಕಾರಜೋಳ ಪ್ರಯತ್ನದ ಫಲ: ಲೋಣಿ

ಯೋಜನೆಗೆ ಸಚಿವ ಸಂಪುಟ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2022, 11:55 IST
Last Updated 26 ಆಗಸ್ಟ್ 2022, 11:55 IST
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ   

ವಿಜಯಪುರ:ಇಂಡಿ, ನಾಗಠಾಣ, ವಿಜಯಪುರ ಮತ್ತು ಬಬಲೇಶ್ವರ ತಾಲ್ಲೂಕಿನ ರೈತರ ದಶಕಗಳ ಕಾಲದ ಬೇಡಿಕೆಯಾಗಿದ್ದ ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆಯನ್ನು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರ ಒತ್ತಾಸೆಯ ಮೇರೆಗೆ ಸಚಿವ ಸಂಪುಟ ಅನುಮೋದನೆ ನೀಡುರುವುದು ಸ್ವಾಗತಾರ್ಹ ಎಂದು ಬಿಜೆಪಿ ಮುಖಂಡ ರವೀಂದ್ರ ಲೋಣಿ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬರಪೀಡಿತ ಲಕ್ಷಾಂತರ ಎಕರೆ ಭೂಮಿಗೆ ನೀರೊದಗಿಸುವ ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಅನುಮೋದನೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಗೋವಿಂದ ಕಾರಜೋಳ ಮತ್ತು ಸಂಸದ ರಮೇಶ ಜಿಗಜಿಣಗಿ ಅವರಿಗೆ ಜಿಲ್ಲೆಯ ರೈತರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆಯುಜಿಲ್ಲೆಯ ರೈತರ ಪಾಲಿಗೆ ದೊಡ್ಡ ಕೊಡುಗೆಯಾಗಿದೆ. 56 ಹಳ್ಳಿಗಳ 49,730 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಈ ಯೋಜನೆಯಿಂದ ಸಿಗಲಿದೆ. ಇದಕ್ಕಾಗಿ ಸರ್ಕಾರ ₹2638 ಕೋಟಿ ವೆಚ್ಚ ಮಾಡಲಿದೆ ಎಂದು ಹೇಳಿದರು.

ADVERTISEMENT

ಮೊದಲ ಹಂತದಲ್ಲಿ ₹ 760 ಕೋಟಿ ಅನುದಾನದಲ್ಲಿ 43 ಹಳ್ಳಿಗಳ 28 ಸಾವಿರ ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಲಭಿಸಿದೆ.ಎರಡನೇ ಹಂತದಲ್ಲಿ ₹ 1274 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತದೆ. ಮೂರನೇ ಹಂತದಲ್ಲಿ₹605 ಕೋಟಿ ಅನುದಾನದಲ್ಲಿ 28 ಸಾವಿರ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ಲಭಿಸಲಿದೆ ಎಂದರು.

ರೈತ ಹೋರಾಟಗಾರರಾದ ಅಣ್ಣಪ್ಪ ಖೈನೂರ ಮಾತನಾಡಿ, ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿರುವುದು ಐತಿಹಾಸಿಕ ನಿರ್ಣಯವಾಗಿದೆ. ಬೃಹತ್‌ ಮೊತ್ತದ ಯೋಜನೆ ಜಾರಿಗೆ ಕಾರಜೋಳ ಅವರು ಸರ್ಕಾರದಿಂದ ಅನುಮೋದನೆ ಮಾಡಿಸಿರುವುದು ಶ್ಲಾಘನೀಯ. ಇದರಿಂದ ಲಕ್ಷಾಂತರ ರೈತರಿಗೆ ಅನುಕೂಲವಾಗಿದೆ. ದ್ರಾಕ್ಷಿ, ಲಿಂಬೆ, ಹಣ್ಣು, ಹಂಪಲು, ವಾಣಿಜ್ಯ ಬೆಳೆ ಬೆಳೆಯಲು ಅನುಕೂಲವಾಗಿದೆ ಎಂದರು.

ರೈತ ಸಂಘದ ಮುಖಂಡ ಗುರುನಾಥ ಬಗಲಿ, ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆಗೆ 1983-84ರಿಂದ ಹೋರಾಟ ನಡೆಸಲಾಗಿತ್ತು. ಇದುವರೆಗೆ ಹೋರಾಟ ನಡೆಸಿದರೂ ಜಾರಿಯಾಗಿರಲಿಲ್ಲ.ಈ ಹೋರಾಟಕ್ಕೆ ಮೊದಲಿನಿಂದಲೂ ಬೆಂಬಲ ನೀಡಿದ್ದಸಚಿವ ಕಾರಜೋಳ ಅವರುಯೋಜನೆ ಅನುಮೋದನೆ ನೀಡಿರುವುದುಬಹಳ ಖುಷಿಯಾಗಿದೆ. ಶೀಘ್ರ ಟೆಂಡರ್ ಕರೆದು ಯೋಜನೆ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.

ನಿರೀಕ್ಷೆಯಂತೆ ಎಲ್ಲವೂ ನಡೆದರೆ ಎರಡು, ಮೂರು ವರ್ಷದಲ್ಲಿ ಇಂಡಿ, ನಾಗಠಾಣ, ಹೊರ್ತಿ ಭಾಗ ಸಂಪೂರ್ಣ ನೀರಾವರಿ ಆಗಲಿದ್ದು, ಲಕ್ಷಾಂತರ ಜನರ ಬದುಕು ಹಸನಾಗಲಿದೆ ಎಂದರು.

ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಭೀಮಸೇನ ಕೋಕರೆ, ಎಸ್.ಎಂ.ಬಿರಾದಾರ, ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಮಲ್ಲನಗೌಡ ಪಾಟೀಲ ಡೋಮನಾಳ, ವಿಠಲ ಏಳಗಿ, ಎ.ಎಂ.ಪಟೇಲ್, ಮಲ್ಲಿಕಾರ್ಜುನ ಶ್ರೀಶೈಲ ಮೆಂಡೆಗಾರ ಇದ್ದರು.

***

ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಹೊರಗುಳಿಯುವ ಮೂಲಕನೀರಾವರಿ ಸೌಲಭ್ಯ ವಂಚಿತವಾಗಿದ್ದ ಇಂಡಿ, ವಿಜಯಪುರ, ನಾಗಠಾಣ ವ್ಯಾಪ್ತಿಗೆ ನೀರೋದಗಿಸುವ ಮಹತ್ವದ ರೇವಣ ಸಿದ್ದೇಶ್ವರ ಯೋಜನೆ ಅನುಷ್ಠಾನಕ್ಕೆ ಶೀಘ್ರದಲ್ಲೇ ಚಾಲನೆ ನೀಡುವ ಮೂಲಕ ಈ ಭಾಗವನ್ನು ಹಸಿರಾಗಿಸಲಾಗುವುದು.
–ಗೋವಿಂದ ಕಾರಜೋಳ, ಜಲಸಂಪನ್ಮೂಲ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.