ಸಿಂದಗಿ: ಲೋಕಸಭಾ ಚುನಾವಣಾ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಮತಕ್ಷೇತ್ರದ ದೇವಣಗಾಂವ, ಬೊಮ್ಮನಹಳ್ಳಿ, ಗುಂದಗಿ, ಕಡಣಿ, ರಾಮನಹಳ್ಳಿ, ಬಳಗಾನೂರ, ಮೋರಟಗಿ ಹಾಗೂ ಯಂಕಂಚಿ ಗ್ರಾಮಗಳಲ್ಲಿ ಬುಧವಾರ ಸಂಚರಿಸಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.
ದೇಶದ ಭದ್ರತೆ, ಸುರಕ್ಷತೆಗಾಗಿ ಬಿಜೆಪಿ ಅನಿವಾರ್ಯ. ವಿಶ್ವಕಂಡ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಅವರ ಕೈ ಬಲಪಡಿಸಲು ನನಗೆ ಮತ ನೀಡುವಂತೆ ಅಭ್ಯರ್ಥಿ ಜಿಗಜಿಣಗಿ ಮನವಿ ಮಾಡಿಕೊಂಡರು.
ಮಾಜಿ ಶಾಸಕ ರಮೇಶ ಭೂಸನೂರ, ವಿಧಾನಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ, ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎನ್.ಪಾಟೀಲ, ಉಪಾಧ್ಯಕ್ಷ, ಪುರಸಭೆ ಸದಸ್ಯ ರಾಜಣ್ಣ ನಾರಾಯಣಕರ, ಜೆಡಿಎಸ್ ರಾಜ್ಯ ಘಟಕದ ಕಾರ್ಯದರ್ಶಿ ಪ್ರಕಾಶ ಹಿರೇಕುರುಬರ, ಬಿಜೆಪಿ ಪ್ರಮುಖ ಶ್ರೀಶೈಲಗೌಡ ಬಿರಾದಾರ, ಗುರು ತಳವಾರ ಇದ್ದರು.
ಪಾದಯಾತ್ರೆ: ಮಾಜಿ ಶಾಸಕ ರಮೇಶ ಭೂಸನೂರ ನೇತೃತ್ವದಲ್ಲಿ ಬಿಜೆಪಿ, ಜೆಡಿಎಸ್ ಮುಖಂಡರು ಪಟ್ಟಣದ ವಕೀಲರ ಸಂಘದ ಕಾರ್ಯಾಲಯದಲ್ಲಿ ವಕೀಲರಿಗೆ ಮತಯಾಚಿಸಿದರು. ಪಟ್ಟಣದ ಬಸ್ ನಿಲ್ದಾಣ, ಬಜಾರದಲ್ಲಿ ಪಾದಯಾತ್ರೆ ಕೈಗೊಂಡು ಮತಯಾಚನೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.