ವಿಜಯಪುರ: ‘ಜಾತಿ ಸಮೀಕ್ಷೆ ವೇಳೆ ಪಂಚಮಸಾಲಿಗಳು ಏನೆಂದು ನಮೂದಿಸಬೇಕು ಎಂದು ಚರ್ಚಿಸಿ, ನಿರ್ಧರಿಸಲು ಜುಲೈ 13ರಂದು ವಿಜಯಪುರದಲ್ಲಿ ರಾಜ್ಯ ಮಟ್ಟದ ಚಿಂತನಾ ಸಭೆ ಆಯೋಜಿಸಲಾಗಿದೆ’ ಎಂದು ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
‘ಪಂಚಮಸಾಲಿನ ವಕೀಲರ ಪರಿಷತ್ತಿನ ಈ ಸಭೆಯಲ್ಲಿ ವಿವಿಧೆಡೆಯ 800 ವಕೀಲರು ಹಾಗೂ ಪಂಚಮಸಾಲಿ ಲಿಂಗಾಯತ, ದೀಕ್ಷಾ ಲಿಂಗಾಯತ, ಗೌಡ ಲಿಂಗಾಯತ, ಮಲೆಯ ಲಿಂಗಾಯತ ಸೇರಿ ಎಲ್ಲ ಒಳಪಂಗಡದವರು ಭಾಗವಹಿಸುವರು’ ಎಂದು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
‘ಪಂಚಮಸಾಲಿಗಳು ಹಿಂದಿನ ಸಮೀಕ್ಷೆಗಳಲ್ಲಿ ಪಂಚಮಸಾಲಿ, ಲಿಂಗಾಯತ ಪಂಚಮಸಾಲಿ, ವೀರಶೈವ ಪಂಚಮಸಾಲಿ ಎಂದು ವಿವಿಧ ಹೆಸರು ನಮೂದಿಸಿದ್ದಾರೆ. ಆಗ ಹೆಚ್ಚಿನ ಜಾಗೃತಿ ಇರಲಿಲ್ಲ. ಈಗ 2 ಎ ಮೀಸಲಾತಿ ಹೋರಾಟದ ಪರಿಣಾಮ ಪಂಚಮಸಾಲಿ ಸಮಾಜದಲ್ಲಿ ಜಾಗೃತಿ ಮೂಡಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.