ಸಿಂದಗಿ: ಪಟ್ಟಣದ ಅಂಜುಮನ್ ಮೈದಾನದಲ್ಲಿ ಸೋಮವಾರ ಬೆಳಿಗ್ಗೆ ಮುಸ್ಲಿಮರು ಈದ್-ಉಲ್-ಫಿತ್ರ್ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
‘ಈ ಸಂದರ್ಭದಲ್ಲಿ ಹಲವರು ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಸಾಂಕೇತಿಕವಾಗಿ ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡಿದ್ದರು’ ಎಂದು ಪುರಸಭೆ ಸದಸ್ಯ ರಹೀಂ ದುದನಿ ತಿಳಿಸಿದರು.
ಮೌಲಾನಾ ಮೊಹಮ್ಮದ ಅಲಿ ಇಟಗಿ ಅವರು ಧರ್ಮ ಸಂದೇಶ ತಿಳಿಸಿದರು.
ಬಳಿಕ ಮನೆಗಳಲ್ಲಿ ಆಪ್ತರ ಜೊತೆ ಹಬ್ಬದ ಊಟ ಸವಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.