ಕೊಲ್ಹಾರ: ಕೇಂದ್ರ ಬಿಜೆಪಿ ಸರ್ಕಾರ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಕೃಷಿ, ಕೈಗಾರಿಕೆ, ಸೇವಾ ವಲಯ, ಆರೋಗ್ಯ, ಶಿಕ್ಷಣ ಅಭಿವೃದ್ಧಿಗೆ ಶ್ರಮಿಸಿದೆ ಎಂದು ಮಾಜಿ ಸಚಿವ ಎಸ್. ಕೆ. ಬೆಳ್ಳುಬ್ಬಿ ಮಾತನಾಡಿ ಎಂದು ತಿಳಿಸಿದರು.
ಅಂಗಡಿಗೆರಿ ಮಠದಲ್ಲಿ ಬಿಜೆಪಿಯ ಬಸವನ ಬಾಗೇವಾಡಿ ಮಂಡಲ ವತಿಯಿಂದ ಭಾನುವಾರ ನಡೆದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಕಾರ್ಯಕರ್ತರು ಕೇಂದ್ರ ಸರ್ಕಾರದ 11 ವರ್ಷಗಳ ಸಾಧನೆಯನ್ನು ಮನೆ ಮನೆಗೆ ತಿಳಿಸುವ ಕಾರ್ಯ ಮಾಡಬೇಕು’ಎಂದು ಸಲಹೆ ನೀಡಿದರು.
ಮಂಡಲದ ಅಧ್ಯಕ್ಷ ಸಿದ್ದರಾಮ. ಕಾಖಂಡಕಿ, ಜಿಲ್ಲಾ ಸಂಚಾಲಕ ಭರತ ಕುಲಕರ್ಣಿ, ಬೀರಪ್ಪ ಸಾಸನೂರ, ಶಾಂತಾಬಾಯಿ ಬೀಳಗಿ, ವಿಠ್ಠಲ ಆಸಂಗಿ, ಪರಶುರಾಮ ನಾಟಿಕರ, ಶಂಕರೇಗೌಡ ಪಾಟೀಲ, ಬಸವರಾಜ ಬಿಜಾಪುರ, ಜಗದೀಶ ಸುನಗದ, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.